ಮಾನ್ವಿ ನ.20: ‘ತಾಲ್ಲೂಕಿನಲ್ಲಿ ಕುರಿಗಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರದ ಅನುಗ್ರಹ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಶ್ರೀಅಮೋಘ ಸಿದ್ದೇಶ್ವರ ಕುರಿ ಸಂಗೋಪನೆ ಹಾಗೂ ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಒತ್ತಾಯಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕುರಿಗಾರರು ಇದ್ದಾರೆ. ಆದರೆ ಅಧಿಕಾರಿಗಳ ನಿಷ್ಕಾಳಜಿ ಹಾಗೂ ಮಾಹಿತಿ ಕೊರತೆಯಿಂದ ಯೋಜನೆ ಲಾಭ ಪಡೆಯುವಲ್ಲಿ ಕುರಿಗಾರರು ವಂಚಿತರಾಗಿದ್ದಾರೆ. 2014ರಲ್ಲಿ ಸತ್ತ ಪ್ರತಿ ಕುರಿಗೆ ರೂ5ಸಾವಿರ ಪರಿಹಾರ ಕೇವಲ 40 ಕುರಿಗಾರರಿಗೆ ಮಾತ್ರ ದೊರಕಿತ್ತು. ಮಳೆಗಾಲದಲ್ಲಿ ಕುರಿಗಳು ಕಾಲು ಬಾಯಿ ರೋಗ, ಚರ್ಮ ಗಂಟು ರೋಗ ಬಾಧೆಯಿಂದ ಬಳಲುತ್ತವೆ. ಆದರೆ ಸಕಾರದಿಂದ ಔಷಧಿಗಳು ಸಮರ್ಪಕವಾಗಿ ಸಿಗುತ್ತಿಲ್ಲ’ ಎಂದರು.
2018-19ರಲ್ಲಿ ಸಂಚಾರಿ ಕುರಿಗಾರರಿಗೆ 300ಟೆಂಟ್ ಬಲೆಗಳ ಪರಿಕರಗಳು ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಅಡಿಯಲ್ಲಿ 80 ಜನರಿಗೆ ಸಾಲ ಸೌಲಭ್ಯ ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಕೇವಲ 10 ಕುರಿಗಾರರಿಗೆ ಮಾತ್ರ ಟೆಂಟ್ ಬಲೆ ಹಾಗೂ 15 ಜನರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಜಿಲ್ಲೆಯಲ್ಲಿ 9ಲಕ್ಷ ಕುರಿಗಳಿದ್ದು ಕುರಿಗಾರರಿಗೆ ಸರ್ಕಾರದ ಸೌಲಭ್ಯಗಳು ಸಿಗದೆ ಅನ್ಯಾಯವಾಗಿದೆ’ ಎಂದು ತಿಳಿಸಿದರು.
‘ ಅನುಗ್ರಹ ಯೋಜನೆ ಸದುಪಯೋಗ ಆಗುವ ನಿಟ್ಟಿನಲ್ಲಿ ಫಲಾನುಭವಿಗಳ ಆಯ್ಕೆಗೆ ಈಗಿರುವ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಅನುಮೋದನೆ ಪ್ರಕ್ರಿಯೆಯನ್ನು ಕಡಿತಗೊಳಿಸಬೇಕು. ಪಶುಸಂಗೋಪನೆ ಇಲಾಖೆಯ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಬೇಕು’ ಎಂದು ಅವರು ಮನವಿ ಮಾಡಿದರು. ಶ್ರೀಅಮೋಘ ಸಿದ್ದೇಶ್ವರ ಕುರಿ ಸಂಗೋಪನೆ ಹಾಗೂ ಉಣ್ಣೆ ಸಹಕಾರ ಸಂಘದ ನಿರ್ದೇಶಕರಾದ ಪ್ರಕಾಶ ಬೊಮ್ಮನಾಳ ಹಾಗೂ ಮುದುಕಪ್ಪ , ಕಾರ್ಯದರ್ಶಿ ದೇವು ಬ್ಯಾಗವಾಟ ಇದ್ದರು.