ಮಂತ್ರಾಲಯದಲ್ಲಿ ತುಂಗಾರತಿ ಉತ್ಸವ

ರಾಯಚೂರು ನ.20: ಸಮೀಪದ ಮಂತ್ರಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಿನ್ನೆ  ಕಾರ್ತಿಕ ಪೌರ್ಣಿಮೆ ಅಂಗವಾಗಿ ತುಂಗಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರತೀರ್ಥರು ತುಂಗಭದ್ರ ನದಿಗೆ ತುಂಗಾ ಆರತಿ ನೆರವೇರಿಸಿದರು .

ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಮೆರವಣಿಗೆಯೊಂದಿಗೆ ತಂದು ನದಿ ತೀರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು .

ಇದೆ ಸಂದರ್ಭದಲ್ಲಿ ದೀಪೋತ್ಸವ ಹಾಗೂ ತೆಪ್ಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.ನದಿ ತೀರದ ಭವ್ಯ ವೇದಿಕೆಯಲ್ಲಿ ಖ್ಯಾತ ದಾಸವಾಣಿ ಕಲಾವಿದ ಅನಂತ ಕುಲಕರ್ಣಿಯವರಿಂದ ತುಂಗಾರತಿಯ ಕುರಿತು ವಿಶೇಷ ಸಂಗೀತ ನೇರವೇರಿತು .