ಕರೇಗುಡ್ಡ : ನ.23ರಂದು  ಶ್ರೀ ಗುರು ಮಹಾಂತೇಶ್ವರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ

.            ಮಾನ್ವಿ ನ.19: ತಾಲೂಕಿನ ಸುಕ್ಷೇತ್ರ  ಕರೇಗುಡ್ಡ ಗ್ರಾಮದಲ್ಲಿ ನ.23ರಂದು  ಶ್ರೀ ಗುರು ಮಹಾಂತೇಶ್ವರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ  ಅಂಗವಾಗಿ ನ.23ರಂದು ಬೆಳ್ಳಿಗೆ 9 ಗಂಟೆಗೆ ಪಲ್ಲಕ್ಕಿ ಉತ್ಸವ, ನಂದಿಕೋಲು ಸೇವೆ,ಪುರವಂತಿಕೆ ನಡೆಯಲಿದ್ದು,
ಸಾಯಂಕಾಲ 5 ಗಂಟೆಗೆ ನೂತನ ಮಹಾರಥದ ಚಾಲನೆ ಹಾಗೂ ಧಾರ್ಮಿಕ ಗೋಷ್ಠಿಯು ನಾಡಿನ ಹರ-ಗುರು ಚರಮೂರ್ತಿ ಗಳ ಸಾನಿಧ್ಯದಲ್ಲಿ ನಡೆಯಲಿದೆ. ಸಕಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು  ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.