ಪ್ರೀತಿಯಿಂದ ಕೊಟ್ಟ ತುತ್ತು ಮತ್ತು ಮನಸಾರೆ ಕೊಟ್ಟ ಮುತ್ತು
ಲೇಖಕರು: ದೀಪಕ್ ಶಿಂಧೆ
ಅವನೊಬ್ಬ ಕೋಟ್ಯಾಧೀಶನ ಮಗ ವಿದೇಶಿ ಕಂಪನಿಯ ಜೊತೆಗೆ ಅವತ್ತು ತುಂಬಾ ಇಂಪಾರ್ಟೆಂಟ್ ಆಗಿರೋ ಮೀಟಿಂಗು ಡ್ರೈವರ್ ಅನ್ನುತ್ತಿದ್ದಂತೆ ಎದುರು ಬಂದು ನಿಂತ ಕೋಟಿ ಬೆಲೆಯ ಕಾರು.ವೈಟ್ ಎಂಡ್ ವೈಟ್ ಡ್ರೆಸ್ಸಲ್ಲಿ ಕಾರಲ್ಲಿ ಕುಳಿತ ಡ್ರೈವರ್…ಕಾರು ಚಲಿಸುತ್ತಿದ್ದಂತೆಯೆ ಮ್ಯೂಜಿಕ್ ಸಿಸ್ಟಮ್ಮಿನಲ್ಲಿ ಕೇಳಿ ಬರುತ್ತಿರುವ ಲತಾ ಮಂಗೇಶ್ಕರ್ ಹಾಡಿದ ಏಕ್ ಕಲಿ ಮುಸ್ಕುರಾಯಿ ಚಿತ್ರದ ಹಾಡು….ಮತ್ತದೆ ಪ್ಲಾಶ್ ಬ್ಯಾಕ್…ನಾ ತುಮ್ ಭೇವಫಾ ಹೋ ನ ಹಮ್ ಬೇವಫಾ ಥೇ….ಹೀಗೆ ಬದುಕು ಎಲ್ಲಿಂದ ಎಲ್ಲಿಗೊ ಬಂದು ನಿಲ್ಲುವಷ್ಟರಲ್ಲಿ ಬೆಂಗಳೂರಿನಲ್ಲಿ ಅಕಾಲಿಕವಾಗಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳಲ್ಲಿ ಉಕ್ಕಿ ಹರಿವ ನದಿಗಳಂತೆ ಮಳೆಯ ನೀರು.ಯಾವತ್ತಿಗೂ ಗಿಜಿಗುಡುವ ರಸ್ತೆಗಳಲ್ಲಿ ಅವತ್ತು ಅರ್ಧಕ್ಕೆ ನಿಂತ ಸಾಲು ಸಾಲು ವಾಹನಗಳು ಬಿ ಎಮ್ ಡಬ್ಲೂ,ಫೇರಾರಿಯಂತ ಕಾರುಗಳ ಅಕ್ಕಪಕ್ಕದಲ್ಲೆ ನಿಂತ ಓಲಾ ಕ್ಯಾಬ್,ಬಾಡಿಗೆಯ ಆಟೋಗಳು,ಬಳಕುತ್ತ ಸಾಗುವ ಡಬಲ್ ಡೆಕ್ಕರ್ ಬಸ್ಸುಗಳು,ಮಳೆ ಎನೋ ಕಮ್ಮಿ ಆಯ್ತು ಆದರೆ ಹರಿಯುವ ನೀರು ಕಡಿಮೆ ಆಗದೆ ತಳ್ಳುವ ಗಾಡಿಯಲ್ಲಿ ಏನನ್ನೋ ಎಳೆದೊಯ್ಯುತ್ತಿದ್ದ ಕೂಲಿಯವನ ಮೊಳಕಾಲ ತನಕ ಹರಿಯುತ್ತಿರುವ ನೀರು…ಹೀಗೆ ಬದುಕು ಎಲ್ಲೋ ಒಂದು ಕಡೆ ಎಲ್ಲರನ್ನೂ ಎಲ್ಲವನ್ನೂ ತಟಸ್ಥಗೊಳಿಸಿಬಿಡುತ್ತದೆ.ಹಣ ಕಳೆದುಹೋದರೆ ಮತ್ತೆ ಗಳಿಸಿಬಿಡಬಹುದು ಆದರೆ ಗುಣ ಕಳೆದು ಹೋದರೆ??ಎಸ್…. ಕಮ್ ಟು ದಿ ಪಾಯಿಂಟ್. ಅವರು ನಮ್ಮ ಜೊತೆಗೆ ಇದ್ದಾಗ ಒಂದಷ್ಟು ಪ್ರೀತಿಯ ಮಾತು ಆಡಬೇಕಿತ್ತು,ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದವರು ಇಷ್ಟು ಎತ್ತರಕ್ಕೆ ಬೆಳೆದು ನಿಂತೆವಲ್ಲ ಈಗೆಲ್ಲ ಅಮ್ಮಾ ಇರಬೇಕಿತ್ತು,ಕೆಲವು ವರ್ಷಗಳ ಹಿಂದಷ್ಟೇ ತುಂಬಿದ ಸಭೆಯೊಂದರಲ್ಲಿ ಬಡವಾ ರ‌್ಯಾಸ್ಕಲ್ ಅಂತ ಪಾರ್ಟಿಯೊಂದರಲ್ಲಿ ಅವಮಾನಿಸಿದ್ದ ಬಡ್ಡಿಮಗ ಬಾಲ್ಯದ ಗೆಳೆಯ ಇವತ್ತಿನ ಪಾರ್ಟಿಗೆ ಬರಬೇಕಿತ್ತು,ನಿನ್ನ ಯೋಗ್ಯತೆಗೆ ನಿನ್ನನ್ನ ಯಾರೊ ಪ್ರೀತಿಸ್ತಾರೆ?? ಐ ಜಸ್ಟ್ ಪ್ಲರ್ಟ ವಿಥ್ ಯೂ ಇಟ್ಸ ಟಾಯಮ್ ಪಾಸ್ ಅಂದಿದ್ದ ಪ್ರೇಯಸಿ,ಮಚಾ ಸೋನಿ ಎರಿಕ್ಸನ್ ಡ್ಯೂಯಲ್ ಕ್ಯಾಮೆರಾ ಮೊಬೈಲ್ ಇದು ರೇಟ್ ಗೊತ್ತಾ?? ಅಂದಿದ್ದ ಗೆಳತಿಯ ಅಣ್ಣ ಇವತ್ತು ಎದುರಿಗೆ ಇರಬೇಕಿತ್ತು ಹೀಗೆ ಎನೇನೋ ಆಸೆಗಳು ನಮ್ಮನ್ನ ಕೊನೆಯ ಕ್ಷಣದ ತನಕ ಕಾಡಿಬಿಡುತ್ತವೆ.ಐಎಎಸ್ ಅಧಿಕಾರಿ ಒಬ್ಬ ರಾಜಿನಾಮೆ ಕೊಟ್ಟು ಸನ್ಯಾಸಿಯಾಗಿ ಬಿಡುತ್ತಾನೆ.ಇನ್ನೆಲ್ಲೋ ಒಂದು ಕಡೆ ಕೋಟಿಗಟ್ಟಲೆ ಆಸ್ತಿಯನ್ನ ಅನಾಥಾಶ್ರಮಕ್ಕೋ,ವೃದ್ದಾಶ್ರಮಕ್ಕೋ ಆಗರ್ಭ ಶ್ರೀಮಂತ ನೊಬ್ಬ ದಾನವಾಗಿ ಕೊಟ್ಟು ಬಿಡುತ್ತಾನೆ,ನಮ್ಮದೆ ಓರಗೆಯ ಸ್ಪುರದ್ರೂಪಿ ಹೆಂಗಸೊಬ್ಬಳು ಮದುವೆಯನ್ನ ನಿರಾಕರಿಸಿ ಅಪ್ಪ ಅಮ್ಮನ ಜೊತೆಗೆ ಉಳಿದುಬಿಡುತ್ತಾಳೆ.ಗುರುಗಳೇ ನಿಮ್ಮ ಜೀವನದ ಗುರಿ ಏನು ಅಂತ ಕೇಳಿ ನೋಡಿ ಒಂದು ಒಳ್ಳೆಯ ನೌಕರಿ,ದೊಡ್ಡದೊಂದು ಬ್ಯುಜಿನೆಸ್ಸು,ಮದುವೆ,ಸ್ವಂತದ್ದೊಂದು ಮನೆ,ಓಡಾಡೋಕೆ ಕಾರು ಅನ್ನುವ ಉತ್ತರವಷ್ಟೇ ಕಾಮನ್ ಆಗಿ ಎಲ್ಲರ ಬಾಯಿಂದ ಬಂದು ಬಿಡುತ್ತದೆ.ಆದರೆ ಇವೆಲ್ಲ ಒಲಿದು ಬಂದ ಬಳಿಕ ಅಥವಾ ಕಷ್ಟ ಪಟ್ಟು ಗಳಿಸಿಕೊಂಡ ಬಳಿಕ ಆರ್ ಯೂ ಹ್ಯಾಪಿ ಅಂತ ಕೇಳಿ ನೋಡಿ ತುಂಬಾ ಜನಾ ಹೇಳುವ ಒಂದೇ ಒಂದು ಕಾಮನ್ ಮಾತು ನಾನು ಡಾಕ್ಟರ್ ಆಗೋಬದ್ಲು ಲಾಯರ್ ಆಗ್ಬೇಕಿತ್ತು,ಇಂಜನಿಯರಿಂಗ್ ನನ್ನಿಷ್ಟದ ಸಬ್ಜೆಕ್ಟೇ ಅಲ್ಲ,ಐ ಯಾಮ್ ನಾಟ್ ಸ್ಯಾಟಿಸ್ಪೈಡ್ ವಿಥ್ ವಾಟ್ ಐ ಹ್ಯಾವ್….ಹೌದು ಖಂಡಿತ ಒಪ್ಪಿಕೊಳ್ಳೋಣ ಸಿಕ್ಕಾಪಟ್ಟೆ ಹಣ ಗಳಿಸುವ ಧಾವಂತಕ್ಕೆ ಬಿದ್ದ ಹುಡುಗನೊಬ್ಬ ತನ್ನ ಅಪ್ಪ ಅಮ್ಮನ ಜೊತೆಗೆ ಸಮಯವನ್ನ ಕಳೆಯಲಿಲ್ಲ ಅಂದರೆ,ಅಥವಾ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗನನ್ನ ಸ್ಥಿತಿವಂತರ ಹುಡುಗಿಯೊಬ್ಬಳು ಅವನು ಬಡವ ಅನ್ನುವ ಕಾರಣಕ್ಕೆ ತಿರಸ್ಕರಿಸಿದಳು ಅಂದರೆ,ಅಥವಾ ಇಷ್ಟೇ ಗುರು ಜೀವನಾ ಅನ್ನುವ ಹಂತವನ್ನ ನಾವು ತಲುಪಿ ಬಿಟ್ಟಿದ್ದೇವೆ ಅನ್ನುವದಾದರೆ ನಮ್ಮ ಬದುಕು ಖಂಡಿತ ಪರಿಪೂರ್ಣ ಅಲ್ಲವೇ ಅಲ್ಲ.ಒಂದಷ್ಟು ಧ್ಯಾನ,ಆಧ್ಯಾತ್ಮ,ಯೋಗ,ಸೆಕ್ಸ್,ಹಾಡು,ಮ್ಯೂಜಿಕ್,ಸಂಗೀತದ ಇನ್ಸ್ಟ್ರುಮೆಂಟ್ಸ್, ಪುಟ್ಟ ಕೋನೆಯಲ್ಲಿ ಹರವಿಕೊಂಡ ಒಂದಷ್ಟು ಪುಸ್ತಕಗಳು,ಅರ್ಧಕ್ಕೆ ಓದಿ ಪುಟ ಮಡಚಿ ಇಟ್ಟ ಕಾದಂಬರಿ,ಕತ್ತಲ ಕೋನೆಯೊಂದರಲ್ಲಿ ಈಗಷ್ಟೆ ಹಚ್ಚಿಟ್ಟ ಕ್ಯಾಂಡಲ್ಲಿಗೆ ಹೊತ್ತಿಸಿದ ಸಿಗರೇಟು,ಅರ್ಧ ಗ್ಲಾಸು ಸರಾಯಿಗೆ ಸುರಿದುಕೊಂಡ ನೀರು,ಅಥವಾ ದೇವರ ಕೋನೆಯಲ್ಲಿ ನಿಧಾನಕ್ಕೆ ಉರಿವ ಊದುಬತ್ತಿಯ ಘಮ,
ಇದ್ಯಾವುದೂ ನಮಗೆ ನೆಮ್ಮದಿ ಅಥವಾ ಸಮಾಧಾನವನ್ನ ಕೊಡುತ್ತಿಲ್ಲ ಅಂದರೆ ಒನ್ಸ ಅಗೇನ್ ನಾವು ನಮ್ಮ ಜೀವನವನ್ನ ಯಾವತ್ತಿಗೂ ಎಂಜಾಯ್ ಮಾಡಲೇ ಇಲ್ಲ ಅಂತಾನೇ ಅರ್ಥ.ಯಾವತ್ತೋ ಒಂದು ದಿನ ಯಾರೋ ನಮಗೆ ಮನಸಾರೆ ಕೊಟ್ಟ ಮುತ್ತು ಅಥವಾ ಕೈಯ್ಯಾರೆ ಕೊಟ್ಟ ತುತ್ತು ದೇವರ ಪ್ರಸಾದಕ್ಕೆ ಸಮ ಅನ್ನಿಸಬೇಕಾದರೆ ಪ್ರತಿ ಪುಟ್ಟ ಸಂತೋಷವನ್ನು ಕೂಡ ನಾವು ತಪ್ಪದೇ ಸಂಭ್ರಮಿಸಬೇಕು.ನಮಗಾದ ನೋವು,ಅಪಮಾನಗಳನ್ನ, ಹುಟ್ಟಿಕೊಂಡ ಮುನಿಸು,ಅಥವಾ ಜಗಳಗಳನ್ನ ಅಲ್ಲಿಗೆ ಮರೆತು ತಪ್ಪಾಯ್ತು ಕ್ಷಮಿಸಿ ಅನ್ನುವ ಮತ್ತು ಕ್ಷಮೆ ಕೇಳುವವರನ್ನು ಅಷ್ಟೇ ಸುಲಭವಾಗಿ ಕ್ಷಮಿಸಿಬಿಡುವ ದೊಡ್ಡ ಗುಣವನ್ನ ಬೆಳೆಸಿಕೊಂಡು ಬದುಕಿಬಿಡಬೇಕು.ಇವತ್ತು ಇದ್ದವರು ನಾಳೆ ನಮ್ಮ ಎದುರಿಗೆ ಇರುತ್ತಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ.ಲೈಪ್ ಈಜ್ ಅನ್ ಸರ್ಟನಿಟಿ,ಸಾವು ಅನ್ನೋದು ಯಾರಿಗೆ ಯಾವಾಗ ಬೇಕಾದರೂ ಬಂದುಬಿಡುತ್ತೆ. ಅದಕ್ಕೆ ಡಿವಿಜಿಯವರು ಹೇಳಿದಂತೆ ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಮದುವೆಗೋ ಮಸಣಕೋ ಬರಸೆಳೆವ ಕಡೆ ನಡೆ ಎಂದ ಮಂಕುತಿಮ್ಮ ಎನ್ನುವಂತೆ ಒಲಿದಂತೆ ಹಾಡಿ,ಬಂದಂತೆ ಬದುಕಿ ಎಲ್ಲರೊಂದಿಗೆ ಬೆರೆಯುತ್ತ ಹೊರಟು ಬಿಡೋಣ ಏನಂತೀರಿ??

ಮೊ:9482766018