ಮಾನ್ವಿ: ತಾಲೂಕು ಕುರುಬರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಮಾನ್ವಿ: ತಾಲ್ಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಸತ್ಯನಾರಾಯಣ ಆರ್.ಮುಷ್ಟೂರು ವಕೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಶನಿವಾರ ಪಟ್ಟಣದ ಕನಕ ದಾಸ ಪ್ರಸಾದ ನಿಲಯದಲ್ಲಿ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆ ನಡೆಯಿತು.ಅಧ್ಯಕ್ಷರಾಗಿ ಸತ್ಯನಾರಾಯಣ ಆರ್.ಮುಷ್ಟೂರು, ಗೌರವಾಧ್ಯಕ್ಷರಾಗಿ ಡಾ.ಯಂಕನಗೌಡ ಬೊಮ್ಮನಾಳ ಹಾಗೂ ನಕಾಶಿ ಶರಣಪ್ಪ ಬ್ಯಾಗ ವಾಟ, ಕಾರ್ಯಾಧ್ಯಕ್ಷರಾಗಿಎಂ. ಪ್ರವೀಣ ಕುಮಾರ, ಪ್ರಧಾನ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಗೋರ್ಕಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಕನಕದಾಸ ಪ್ರಸಾದ ನಿಲಯದ ನಿರ್ವಹಣೆ, ಸಮಾಜದ ಸಂಘಟನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬೀರಪ್ಪ ಪೂಜಾರಿ ಹಳ್ಳಿಹೊಸೂರು ಹಾಗೂ ರಾಮಣ್ಣ ಪೂಜಾರಿ ಮಾಡಗಿರಿ ಸಭೆಯ ಸಾನ್ನಿಧ್ಯ ವಹಿಸಿದ್ದರು.ರಾಯಚೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ, ಮುಖಂಡರಾದ ಎಂ.ಈರಣ್ಣ ಗುತ್ತೇದಾರ, ಅಮರೇಶಪ್ಪ ಕೊಡ್ಲಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಈರಣ್ಣ ಮರ್ಲಟ್ಟಿ, ವಿಜಯಕುಮಾರ ಉದ್ಬಾಳ, ನಿಂಗಪ್ಪ ನಕ್ಕುಂದಿ, ಶಿವನಗೌಡ ಬೊಮ್ಮನಾಳ, ದೇವೇಗೌಡ ಉದ್ಬಾಳ, ರಾಹುಲ್ ಕಲಂಗೇರಾ, ರಾಮಣ್ಣ ಮೇಟಿ, ವೀರೇಶ ನಕ್ಕುಂದಿ, ಮಲ್ಲನಗೌಡ ಬಾಗಲವಾಡ ಮತ್ತಿತರರು ಇದ್ದರು.