ಸಿಂಧನೂರು: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಒಂದು ದಿನದ ಕಾರ್ಯಾಗಾರ

ಸಿಂಧನೂರು ನ.13: ರಾಯಚೂರು ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಮಹಾವಿದ್ಯಾಲಯ ಸಿಂಧನೂರು ಸಂಯುಕ್ತಾಶ್ರಯದಲ್ಲಿ ಶನಿವಾರ “ರಾಷ್ಟ್ರೀಯ ಶಿಕ್ಷಣ ನೀತಿ-2020” ಎಂಬ ಶೀರ್ಷಿಕೆ ಅಡಿಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು..
ಈ ಸಂಧರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದ ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರ‍ಾದ ಡಾ. ಎಂ. ಯರಿಸ್ವಾಮಿ ಮಾತನಾಡಿ, ‘ರಾಯಚೂರು ವಿಶ್ವವಿದ್ಯಾಲಯವು ಈ ಹೊಸ ಶಿಕ್ಷಣ ನೀತಿಯನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಯಶಸ್ಸುಗೊಳಿಸಲು ಕಾಲೇಜುಗಳಲ್ಲಿ ಇಂತಹ ಕಾರ್ಯಾಗಾರದ ಅವಶ್ಯಕತೆ ಪ್ರಮುಖವಾಗಿತ್ತು ಆದ್ದರಿಂದ ನಮ್ಮ ವಿಶ್ವವಿದ್ಯಾಲಯವು ಇದನ್ನು ಸಿಂಧನೂರು ಮಹಾವಿದ್ಯಾಲಯದಿಂದಲೇ ಪ್ರಾರಂಭಿಸಿದ್ದು ಹೆಮ್ಮೆಯ ಮತ್ತು ಅವಶ್ಯಕತೆಯ ವಿಷಯ’ ಎಂದು ಹೇಳಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಚೇತನ್ ಸಿಂಗಾಯಿ, ವಿಶೇಷಾಧಿಕಾರಿಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಬೆಂಗಳೂರು ಅವರು ತಮ್ಮ ಉಪನ್ಯಾಸದುದ್ದಕ್ಕೂ ಈ ಶಿಕ್ಷಣ ನೀತಿಯ ಸದುಪಯೋಗ , ಅವಶ್ಯಕತೆ ಮತ್ತು ಭವಿಷ್ಯದ ದೃಷ್ಟಿಯಿಂದ ಇದರ ಪೂರಕ ಪ್ರಭಾವಗಳ ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಮತ್ತೊರ್ವಾ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಬಿ.ಸರೋಜ ಸಹ ಪ್ರಾಧ್ಯಾಪಕರು, ಬಳ್ಳಾರಿ ಅವರು ತಮ್ಮ ಉಪನ್ಯಾಸದಲ್ಲಿ ವಿಶಯವಾರು ಆಯ್ಕೆ ಮತು ಒಟ್ಟು ಶೈಕ್ಷಣಿಕ ಬೆಳವಣಿಗೆ ಈ ಶಿಕ್ಷಣ ನೀತಿಯ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾತನಾಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸಿ.ಬಿ.ಚಿಲ್ಕರಾಗಿ ಯವರು ಮಾತನಾಡಿ ಮೂರು ಸಾವಿರ ವಿದ್ಯಾರ್ಥಿಗಳನ್ನು ಹೊಂದಿರುವಂತಹ ನಮ್ಮ ಕಾಲೇಜು ಇಂತಹ ಕಾರ್ಯಾಗಾರವನ್ನು ಆಯೋಜಿಸಿರುವುದು ವಿದ್ಯಾರ್ಥಿಗಳಿಗೆ ಇದರ ಸದುಪಯೋಗ ಆಗಲಿ ಎಂಬ ಆಶಯದೊಂದಿಗೆ. ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಬೇಕಾದ ಎಲ್ಲಾ ಪ್ರಮಾಣಿಕ ಪ್ರಯತ್ನ ವನ್ನು ಕಾಲೇಜಿನ ಪ್ರಾಂಶುಪಾಲನಾಗಿ ಯಾವತ್ತೂ ಮಾಡುವೆ ಎಂಬ ಮಾತನ್ನು ಹೇಳಿದರು.
ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಹನುಮಂತಪ್ಪ ಮಾಡಿದರು. ಪ್ರಾಸ್ತಾವಿಕ ನುಡಿಯನ್ನು ಕಾಲೇಜಿನ ರಾಷ್ಟ್ರೀಯ ಶಿಕ್ಷಣ ನೀತಿಯ ಸಂಯೋಜಕರಾದ ಡಾ. ಸೈಯದ್‌ ಮುಜೀಬ್ ಅಹ್ಮದ್ ಅವರು ನುಡಿದರು, ವಂದನಾರ್ಪಣೆಯನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ. ಹನಮಗೌಡ ಹುನಕುಂಟಿ ಮಾಡಿದರು ಮತ್ತು ಈ ಇಡೀ ಕಾರ್ಯಾಗಾರದ ನಿರ್ವಾಹಕಣೆ/ನಿರೂಪಣೆಯನ್ನು ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ. ಎರಿಯಪ್ಪ ಬೆಳಗುರ್ಕಿರನು ನಿರ್ವಹಿಸಿದರು. ಈ ಸಂಧರ್ಭದಲ್ಲಿ ಸಿಂಧನೂರು ನಗರದ ಬೇರೆ ಬೇರೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು , ಸರ್ಕಾರಿ ಮಹಾವಿದ್ಯಾಲಯದ ಎಲ್ಲಾ ಸಹಾಯಕ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.