ಮಾನ್ವಿಯಲ್ಲಿ ನ.14ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಾನ್ವಿ ನ.11: ಪಟ್ಟಣದ ಖಾದ್ರಿ ಪಂಕ್ಷನ್ ಹಾಲ್ ನಲ್ಲಿ ನ.14ರಂದು  ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ಮಾನ್ವಿ ಹಾಗೂ ಹೆಚ್. ಸೈಯದ್ ಷಾ ಮುರ್ತುಜಾ ಖಾದ್ರಿ (ಆರ್.ಎ)ಚಾರಿಟೇಬಲ್ ಟ್ರಸ್ಟ್ (ರಿ) ಮಾನ್ವಿ ಸಂಯುಕ್ತಾಶ್ರಯದಲ್ಲಿ ಉಚಿತ ಮೆಘಾ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಕಣ್ಣು, ಹೃದಯ , ಕಿವಿ , ಮೂಗು , ಚರ್ಮ ಸಂಬಂಧಿ ಕಾಯಿಲೆಗಳು ಹಾಗೂ ಮಹಿಳೆಯರ ಸಮಸ್ಯೆಗಳಿಗೆ ಸಂಬಂದಿಸಿದ ಇನ್ನಿತರ ಕಾಯಿಲೆಗಳ ಬಗ್ಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ . ಈ ಸಂದರ್ಭದಲ್ಲಿ ಕಣ್ಣಿಗೆ ಸಂಬಂಧಿಸಿದಂತೆ ಅವಶ್ಯಕತೆವುಳ್ಳವರಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಗುವುದು . ಕಾರ್ಯಕ್ರಮದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಕೋವಿಡ್ -19 ಲಸಿಕೆಯನ್ನು ನೀಡಲಾಗುವುದು. ಸಾರ್ವಜನಿಕರು ಶಿಬಿರದ ಸದಪಯೋಗ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ. ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ಮಾನ್ವಿ ಕೋವಿಡ್ -19 ಪ್ರಥಮ ಅಲೆ ಸಂದರ್ಭದಲ್ಲಿ ಮಾನವಿಯತೆಗಾಗಿ ಶ್ರಮಿಸಲು ಒಂದು ಜವಾಬ್ದಾರಿಯುತ ತಂಡವಾಗಿ ಹೊರಹೊಮ್ಮಿದ ಸಂಸ್ಥೆಯಾಗಿದೆ. ಸಂಸ್ಥೆಯ ವತಿಯಿಂದ ಆಹಾರದ ಪದಾರ್ಥಗಳ ಕಿಟ್ ವಿತರಣೆ , ಬಡವರಿಗೆ ವಿವಿಧ ಸರಕಾರದ ಯೋಜನೆಗಳನ್ನು ತಲುಪಿಸುವುದರ ಜತೆಗೆ ಶೈಕ್ಷಣಿಕ ರಂಗದಲ್ಲಿ ಕಾರ್ಯನಿರ್ವಹಹಿಸುತ್ತಿದೆ . ‘ಪ್ರತಿಯೊಬ್ಬರು ಎಲ್ಲರಿಗಾಗಿ, ಎಲ್ಲರೂ ಮಾನವಿಯತೆಗಾಗಿ’ ಎಂಬ ಧ್ಯೇಯ ವಾಕ್ಯದಿಂದ ಕಾರ್ಯನಿರ್ವಹಿಸುವ ಬಯಕೆ ತಂಡಕ್ಕೆ ಇದೆ ಎಂದು ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಹಾಗೂ ಎಚ್.ಸೈಯದ್ ಷಾ ಮುರ್ತುಜಾ ಖಾದ್ರಿ(ಆರ್.ಎ) ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.