ರಂಗಣ್ಣ….ನಮ್ಮಣ್ಣ….ಗೆದ್ದೇ ಗೆಲ್ತಾರೆ ನೋಡಣ್ಣ…!

ರಾಯಚೂರು‌ ನ.11: ಜಿಲ್ಲೆಯಲ್ಲಿ ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ನವಂಬರ್ 21ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಿಂದ ಮತದಾನ ನಡೆಯಲಿದೆ.
ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ದಶಕಗಳಿಂದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ದೇವದುರ್ಗದ ಹಿರಿಯ ಪತ್ರಕರ್ತರಾದ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದು ಈ ಬಾರಿಯ ವಿಶೇಷವಾಗಿದೆ.

ಪರಿಷತ್ತಿನಲ್ಲಿ ದುಡಿದ ಜಿಲ್ಲೆಯ ಹಲವು ಹಿರಿಯ, ಕಿರಿಯ ಮುಖಂಡರು, ಅಭಿಮಾನಿಗಳು, ಗೆಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಜೀವ ಸದಸ್ಯರನ್ನು ಭೇಟಿಯಾಗಿ ಮತ ಯಾಚನೆ ಮಾಡುತ್ತಿದ್ದಾರೆ.‌ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಲವು ಸುತ್ತಿನ ಪ್ರಚಾರ ಕೈಗೊಂಡಿರುವ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರಿಗೆ ಉತ್ತಮ ಸ್ಪಂದನೆ, ಬೆಂಬಲ ವ್ಯಕ್ತವಾಗುತ್ತಿದೆ ಎಂದು ರಂಗಣ್ಣನವರ ಬೆಂಬಲಿಗರು ತಿಳಿಸಿದ್ದಾರೆ.

ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ರಂಗಣ್ಣ ಪಾಟೀಲ್ ಪರವಾಗಿ ಸಂಘಟಿತ ಟೀಮ್ ವರ್ಕ್ ಸಕ್ರೀಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ರಂಗಣ್ಣ ಪಾಟೀಲ್ ಅವರು , ಪರಿಷತ್ತಿನಲ್ಲಿ ತಾವು ಸಲ್ಲಿಸಿದ ಸೇವೆ, ಸಂಘಟನೆ, ಜಿಲ್ಲೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಕೈಗೊಳ್ಳಲು ಉದ್ದೇಶಿಸಿರುವ ಚಟುವಟಿಕೆಗಳ ಕುರಿತು ಪ್ರಸ್ತಾಪಿಸುತ್ತಾ ಮತ ಯಾಚನೆ ಮಾಡುತ್ತಿದ್ದಾರೆ. ಅವರ ಬೆಂಬಲಿಗರು ಖುಷಿಯಿಂದ , ‘ ನಮ್ಮಣ್ಣ. ರಂಗಣ್ಣ….ಗೆದ್ದೇ ಗೆಲ್ತಾರೆ…ನೋಡಣ್ಣ’ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಿದ್ದಾರೆ. ನಮ್ಮ ಎಲ್ಲಾ ಗೆಳೆಯರಿಂದಲೂ ಕೂಡ ರಂಗಣ್ಣನವರಿಗೆ ಶುಭ ಹಾರೈಕೆಗಳು.

ಬಸವರಾಜ ಭೋಗಾವತಿ ಮೊ:9880013122