ಜಿಲ್ಲಾ ಕಸಾಪ ಅಭ್ಯರ್ಥಿ ರಂಗಣ್ಣ ಪಾಟೀಲ್ ಅವರಿಗೆ ಮಾನ್ವಿಯ ಸಮಾನ ಮನಸ್ಕ ಗೆಳೆಯರ ಬೆಂಬಲ


ಮಾನ್ವಿ ನ.08: ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅ್ಲಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರಿಗೆ ಮಾನ್ವಿಯ ಸಮಾನ ಮನಸ್ಕ ಗೆಳೆಯರ ಬಳಗದ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಲ್ಲಿಕಾರ್ಜುನಸ್ವಾಮಿ ಶಿಖರಮಠ ಅವರು ಕಸಾಪ ಚುನಾವಣಾ ಕಣದಿಂದ ‌ನಿವೃತ್ತಿ ಘೋಷಿಸಿರುವ ಕಾರಣ ಅವರನ್ನು ಬೆಂಬಲಿಸಿ ಮೊದಲ ಹಂತದಲ್ಲಿ ಪ್ರಚಾರ ನಡೆಸಿದ್ದ ಸಮಾನ ಮನಸ್ಕ ಗೆಳೆಯರು ಈಗ ಸಮರ್ಥ ಅಭ್ಯರ್ಥಿಯಾಗಿರುವ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ.

ಭಾನುವಾರ ಮಾನ್ವಿ ಪಟ್ಟಣದ ಎಸ್‌ಆರ್‌ಎಸ್‌ವಿ ಕಾಲೇಜಿನಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದ ರಂಗಣ್ಣ ಪಾಟೀಲ್, ‘ ಹಲವು ದಶಕಗಳಿಂದ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ಹುದ್ದೆಗಳ ಮೂಲಕ ನಾಡು, ನುಡಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೆಚ್ಚಿನ ರೀತಿಯಲ್ಲಿ ಶ್ರಮಿಸಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಪರಿಷತ್ತಿನ ಸದಸ್ಯರು ನ.21ರಂದು ನಡೆಯುವ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿ ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಹಲವು ಮುಖಂಡರು, ಪರಿಷತ್ತಿನ ಆಜೀವ ಸದಸ್ಯರು, ರಂಗಣ್ಣ ಪಾಟೀಲ್ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು‌ ಹೇಳಿದರು. ಎಸ್‌ಆರ್‌ಎಸ್‌ವಿ ಕಾಲೇಜಿನ ಪ್ರಾಂಶುಪಾಲ ಈರಣ್ಣ ಮರ್ಲಟ್ಟಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಮುಖಂಡರಾದ ದೇವೇಂದ್ರಗೌಡ ಸಿಂಧನೂರು, ಕಿಡಿಗಣ್ಣಯ್ಯ ಸ್ವಾಮಿ ಉಮಳಿಹೊಸೂರು, ಎಸ್.ಎಚ್.ಸಾಜಿದ್ ಖಾದ್ರಿ, ಹಿರಿಯ ಕಲಾವಿದ ವಾಜಿದ್ ಖಾದ್ರಿ, ಎಂ.ಎಂ.ಹಿರೇಮಠ, ಬಸವರಾಜ ಭೋಗಾವತಿ, ಆರ್.ಸತ್ಯನಾರಾಯಣ ಮುಷ್ಟೂರು ವಕೀಲ, ರಾಜಾ ವಿಜಯಕುಮಾರ ನಾಯಕ, ಭಾನುಪ್ರಕಾಶ ಖೇಣೇದ್, ಬಸವರಾಜ ಬ್ಯಾಗವಾಟ, ಮೈನುದ್ದೀನ್ ಕಾಟಮಳ್ಳಿ, ರವಿಶರ್ಮಾ ಜಾನೇಕಲ್, ಆಂಜನೇಯನಾಯಕ ನಸಲಾಪುರ, ಲಕ್ಷ್ಮಣರಾವ್ ಕಪಗಲ್, ಶರಣಬಸವ ಮದ್ಲಾಪುರ, ಸಂತೋಷ ಹೂಗಾರ, ಸೈಯದ್ ಮಿನಾಜುಲ್ ಹಸನ್ ಡಾ.ಸೈಯದ್‌ಮುಜೀಬ್ ಅಹ್ಮದ್, ಜಿ.ಎಸ್.ಬಾಲಾಜಿ ಸಿಂಗ್ , ಶಂಕ್ರಪ್ಪ ನಕ್ಕುಂದಿ, ಬಾಲಪ್ಪ ಜಗ್ಲಿ, ಇ.ವಿನೋದಕುಮಾರ, ವಿಯಮಹಾಂತೇಶ ಸುಂಕೇಶ್ವರ, ಮಹಿಬೂಬ್ ನಾಯ್ಕ್, ಸಮದಾನಿ ಸಿದ್ದಿಕಿ ವಕೀಲ, ಅಣ್ಣಪ್ಪ ಮೇಟಿಗೌಡ , ಶರಣಬಸವ ಭೋವಿ, ಪವನ್ ಕುಮಾರ್ ಸೇರಿದಂತೆ ಪರಿಷತ್ತಿನ ಆಜೀವ ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.