ಕಾವ್ಯಲೋಕ: ಜಿ.ಪ್ರವೀಣ್ ಬಾಬು ಅವರ ಕವನ ‘ಮಾನವೀಯತೆಯ ಹಣತೆ’

ಮಾನವೀಯತೆಯ ಹಣತೆ

*ಜಿ.ಪ್ರವೀಣ್ ಬಾಬು

ಪಡುವಣದ ಭೂಪ
ಭುವಿಗೆ ನಿತ್ಯದೀಪ..
ಭೂತಾಯಿ ಹಸಿರಾಗಿ ..
ಭಾಸ್ಕರನಿಗೆ ಬಾಗಿ..
ಹರಸಿಹಳು ಮಾನವನ ಹಸಿವನೀಗಿ..

ಕಂಗೊಳಿಸಿತು ಭುವಿಯು ..
ನಕ್ಷತ್ರವ್ಯೂಹದಲಿ ..
ನಿತ್ಯ ದೀಪಾವಳಿ ಭುವಿಗೆ
ತಾರಾಮಂಡಲದಲಿ..

ಹೊರಗೆಲ್ಲಾ ಬೆಳಕಿರಲು..
ಕತ್ತಲು ಮಾನವನ ಮನದೊಳಗೆ..
ಕೂಪಮುಂಡಾಕದ ಮನಸು..
ಹಚ್ಚಿದರೇನು ಅಷ್ಟೊಂದು ದೀಪ
ಕಿಚ್ಚಿರಲು ಮನದೊಳಗೆ..

ಹಚ್ಹೋಣ ಪ್ರೀತಿ ಪ್ರೇಮದ ಹಣತೆ
ಹಚ್ಹೋಣ ಭಾವ ಭಾವೈಕ್ಯತೆಯ ಹಣತೆ..
ಹಚ್ಹೋಣ ಸಮರಸ ಶಾಂತಿಯ ಹಣತೆ
ಹಚ್ಹೋಣ ಮಾನವೀಯತೆಯ ಹಣತೆ..
ಹಚ್ಚೋಣ ಮಾನವೀಯತೆಯ ಹಣತೆ..

ಜಿ ಪ್ರವೀಣ್ ಬಾಬು, ಬೆಂಗಳೂರು