.
ನಗು ಚಲ್ಲಿದ ಅಪ್ಪು
* ರಾಮಕೃಷ್ಣ ಕಟ್ಕಾವಲಿ
ಕೋಟಿ ಕೋಟಿ ಕಲಾ ಪ್ರೇಮಿಗಳಿಗೆ
ಸಿಡಿಲು ಬಡಿದಾಗಿದೆ.
ಯುವ ‘ರತ್ನ’ನ ಹೃದಯ ಬಡಿತ
ಸಮಯ ಮುಗಿಯುವ ಮೊದಲೇ ನಿಲ್ಲಿಸಿಬಿಟ್ಟಿದೆ.
ಕಣ್ಣೀರು ಕೋಡಿ ಹರಿಯುತ್ತಿದೆ
ತಂದೆ ಕಳೆದುಕೊಂಡ ಅನಾಥರು
ಮಗನಿಲ್ಲದ ವೃದ್ಧಾಶ್ರಮ
ಪೋಷಕನಿಲ್ಲದ ದತ್ತು ಶಾಲೆಗಳು
ನೀನಿಲ್ಲದೆ ಎಲ್ಲೆಲ್ಲೂ
ನಿರವ ಮೌನ ಆವರಿಸಿದೆ.
ಬೆಟ್ಟದ ಹೂವು ಅರಳಿತ್ತು
ವೀರ ಕನ್ನಡಿಗರು
ಮುಡಿಯುವ ಮೊದಲೆ
ಚಲಿಸುವ ಮೋಡಗಳೊಂದಿಗೆ
‘ಆಕಾಶ’ಕ್ಕೆರಿಬಿಟ್ಟೆ.
ನಿನ್ನ ಸ್ನಿಗ್ಧ ಮೊಗದ ನಗು
ನೊಂದ ಸಾವಿರಾರು ಮನಗಳಿಗೆ
ಮುಲಾಮು ತಯಾರಿಸುತ್ತಿತ್ತು.
ಪರಮಾತ್ಮನ ಆಟಕ್ಕೆ
ನಗು ಚೆಲ್ಲಿ ಭೂಮಿ ಸೇರಿಬಿಟ್ಟೆ.
ತೆರಯ ಹಿಂದೆ ಸರಿದರೇನಂತೆ
ಅಳಿಸಲಾಗದ ಹೆಜ್ಜೆ ಗುರುತುಗಳು
ಹಚ್ಚು ಒತ್ತಿಬಿಟ್ಟಿವೆ.
ಆದರೂ….
ಕಾಣದಂತೆ ಮಾಯಾವಾಗಿಬಿಟ್ಟೆ.

ಮೊ: 9632432713