ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 2 ಚಿನ್ನ 1 ಬೆಳ್ಳಿ ಪದಕ ಗಳಿಸಿದ ಗೀತಾ ಸಿ

ಸಿಂಧನೂರು ಅ.27: ಮಂಗಳೂರು ಹಾಗೂ ದಾವಣಗೆರೆಯಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆ ಸಿಬ್ಬಂದಿ ಗೀತಾ ಸಿ ಅವರು ವಿವಿಧ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ 2 ರಲ್ಲಿ ಪ್ರಥಮ, 1ರಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ 40ವರ್ಷ ಒಳಪಟ್ಟ ಮಹಿಳಾ ಈಜು ಸ್ಪರ್ಧೆಯಲ್ಲಿ ಬ್ರೆಸ್ಟ್ ಸ್ಟ್ರೋಕ್ 50 ಮೀಟರ್ ನಲ್ಲಿ ಹಾಗೂ ಬ್ಯಾಕ್ ಸ್ಟ್ರೋಕ್ 50 ಮೀಟರ್ ನಲ್ಲಿ ಪ್ರಥಮ ಗಳಿಸಿ ಎರಡು ಚಿನ್ನದ ಪದಕ ಮತ್ತು ಫ್ರೀ ಸ್ಟೈಲ್ ಈಜು ನಲ್ಲಿ ದ್ವಿತೀಯ ಸ್ಥಾನ ಪಡೆದು ಒಂದು ಬೆಳ್ಳಿ ಪದಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ 2018-19 ನೆಯ ಸಾಲಿನಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಆರೋಗ್ಯ ಇಲಾಖೆಯಿಂದ ನಡೆದ ಕ್ರೀಡಾಕೂಟದಲ್ಲಿ ಚೆಸ್ ಕ್ಯಾಲಂ, ಗುಂಡು ಎಸೆತ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದಿರುತ್ತಾರೆ, ಹಾಗೂ ಅನೇಕ ಗಾಯನ ಸ್ಪರ್ಧೆಯಲ್ಲಿ ತಮ್ಮದೇ ಧ್ವನಿಯಿಂದ ಹಾಡಿ ಅನೇಕರನ್ನು ಮನರಂಜಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಕೀರ್ತಿ ಆರೋಗ್ಯ ಇಲಾಖೆ ಸಿಬ್ಬಂದಿ ಗೀತಾ ಅವರಿಗೆ ಸಲ್ಲುತ್ತದೆ ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಗೀತಾ ಅವರಿಗೆ ದಕ್ಷಿಣ ಕನ್ನಡ ಹಾಗೂ ರಾಯಚೂರು ಜಿಲ್ಲೆಯ ಸಮಸ್ತ ನೌಕರರು ಹಾಗೂ ಬಂಟ್ವಾಳ, ಸಿಂಧನೂರು, ಹಾಗೂ ಬೆಳ್ತಂಗಡಿ ಶಾಸಕರು, ದಕ್ಷಿಣ ಕನ್ನಡ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ನೌಕರರು ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭಹಾರೈಸಿದ್ದಾರೆ

ಗೀತಾ ಸಿ