ಲಸಿಕಾಕರಣದ ಮನ ಒಲಿಸುವಿಕೆಯಲ್ಲಿ ಎಲ್ಲರ ಪಾತ್ರವೂ ಮಹತ್ವದ್ದು:ಮುಕ್ಕಣ್ಣ ಕರಿಗಾರ

‘ ಲಸಿಕಾಕರಣದ ಯಶಸ್ಸಿಗೆ ಯಾರಿಂದ ಸಹಾಯವಾಗುತ್ತದೋ ಅವರೆಲ್ಲರ ನೆರವನ್ನು ಪಡೆದು ಯಶಸ್ವಿಯಾಗಿ’ ಎಂದು ನಿನ್ನೆ ದಿನಾಂಕ 26.10.2021 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲಾ ಲಸಿಕಾ ಕಾರ್ಯಕ್ರಮದ ಪ್ರಗತಿಪರಿಶೀಲನಾ ಸಭೆಯಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಪಂಚಾಯತಿಯ ಆಡಳಿತಾಧಿಕಾರಿಗಳು ಆಗಿರುವ ಮಾನ್ಯ ಶ್ರೀ ಮನಿಶ್ ಮೌದ್ಗಿಲ್ ಅವರು ಸೂಚಿಸಿದ್ದರು.ಈ ಸಂದರ್ಭದಲ್ಲಿ ಅವರು ತಾವು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅವರ ಕಛೇರಿಯ ಪರಿಚಾರಕ ನೀಡಿದ್ದ ಅದ್ಭುತ ಹಾಗೂ ಕಾರ್ಯಸಾಧುವಾದ ಒಂದು ಸಲಹೆಯನ್ನು ಸ್ಮರಿಸಿ,ಹೊಸವಿಚಾರಗಳು ಯಾರಿಂದಲೇ ಬರಲಿ,ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು ಎಂದಿದ್ದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನಿರ್ದೇಶನ ಇಂದಿನ ಲಸಿಕಾ ಮೇಳದಲ್ಲಿ ನಮ್ಮ ಅನುಭವಕ್ಕೆ ಬಂದು,ದೃಢಪಟ್ಟಿತು.ನನ್ನ ನೇತೃತ್ವದಲ್ಲಿನ ತಂಡವು ಇಂದು ಬೆಳಿಗ್ಗೆಯಿಂದಲೇ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿರುವವರ ಮನ ಒಲಿಸಲು ಅಜಲಾಪುರ ಮತ್ತು ಜೈಗ್ರಾಮ ಗ್ರಾಪಂಗಳ ಗ್ರಾಮಗಳಲ್ಲಿ ಮನೆಮನೆಗೆ ಭೇಟಿ ನೀಡುತ್ತಿದ್ದೇವೆ‌

ಬದ್ದೆಪಲ್ಲಿ ಗ್ರಾಮದಲ್ಲಿ 22.10.2021 ರಂದು ನಡೆದ ಲಸಿಕಾ ಮೇಳದ ಸಂದರ್ಭದಲ್ಲಿ ಒಬ್ಬ ಮಹಿಳೆ ಎಷ್ಟು ಮನ ಒಲಿಸಿದರೂ ಲಸಿಕೆ ಹಾಕಿಸಿಕೊಂಡಿರಲಿಲ್ಲ.ಆ ಮಹಿಳೆ ನನ್ನ ಕಾರು ಡ್ರೈವರ್ ಶಿವಕುಮಾರ ಅವರ ಸಂಬಂಧಿ ಎಂದು ಗೊತ್ತಾಗಿದ್ದರಿಂದ ಇಂದು ನನ್ನ ಡ್ರೈವರ್ ಶಿವಕುಮಾರ ಅವರನ್ನು ಮನ ಒಲಿಸಲು ತಿಳಿಸಿದೆವು.ಶಿವಕುಮಾರ ಅವರ ದೂರದ ಸಂಬಂಧದಿಂದ ಅತ್ತೆ ಆಗಬೇಕಿದ್ದ ಶ್ರೀಮತಿ ಲಕ್ಷ್ಮೀ ಗಂಡ ಅಂಜಪ್ಪ ಅವರಿಗೆ ಇಂದು ಲಸಿಕೆ ಹಾಕಿಸಲಾಯಿತು.

ತಂಡದಲ್ಲಿ ನನ್ನೊಂದಿಗೆ ಸಿಪಿಒ ಗಂಗಾಧರ ಕುಲ್ಕರ್ಣಿ,ಅಜಲಾಪುರ ಪಿಎಚ್ ಸಿಯ ಡಾ.ರಹೀಲ್,ಅಜೀಂ ಪ್ರೇಮ್ ಜಿ ಸಂಸ್ಥೆಯ ಪ್ರತಿನಿಧಿ ಇಮ್ರಾನ್,ಗ್ರಾಪಂ ಕಾರ್ಯದರ್ಶಿ ಸಿದ್ರಾಮಲು,ಸ್ಟಾಫ್ ನರ್ಸ್ ಶ್ರೀಮತಿ ರಿಹಾನಾ ಮತ್ತು ಆಶಾ- ಅಂಗನವಾಡಿ ಕಾರ್ಯಕರ್ತರೆಯರು ಇದ್ದಾರೆ.