ಮಾನ್ವಿಯಲ್ಲಿ ಡಾ.ವನಿತಾ ಪ್ರಭಾಕರ ಅವರ 25ನೇ ವರ್ಷದ  ಪುಣ್ಯಸ್ಮರಣೆ, ಬೃಹತ್ ರಕ್ತದಾನ ಶಿಬಿರ

ಮಾನ್ವಿ ಅ.26:‘ಮತ್ತೊಬ್ಬರಿಗೆ ಜೀವದಾನ ಮಾಡಲು ನೆರವಾಗುವ ರಕ್ತದಾನ ಕಾರ್ಯ ಶ್ರೇಷ್ಠ ದಾನವಾಗಿದೆ’ ಎಂದು ರಾಯಚೂರಿನ ರಿಮ್ಸ್ ಸಂಸ್ಥೆಯ ರಕ್ತನಿಧಿ ಕೇಂದ್ರದ ಡಾ.ಅಹ್ಮದ್ ಹುಸೇನ್ ಹೇಳಿದರು.
ಸೋಮವಾರ ಪಟ್ಟಣದಲ್ಲಿ ದಿವಂಗತ ಡಾ.ವನಿತಾ ಪ್ರಭಾಕರ ಅವರ 25ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ವನಿತಾ ಪ್ರಭಾಕರ ಆಸ್ಪತ್ರೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನ ಶಿಬಿರ, ಜನರಲ್ಲಿ ಆರೋಗ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಶೇಖರ ಸುವರ್ಣಗಿರಿಮಠ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲ್ಲೂಕು ಕಾರ್ಯದರ್ಶಿ ಮಹಿಬೂಬ್ ಮದ್ಲಾಪುರ, ಡಾ.ಪ್ರಜ್ಞಾ ಹರಿಪ್ರಸಾದ್, ಡಾ.ಹರಿಪ್ರಸಾದ್, ಪ್ರತೀಕ್ಷಾ ಕೆ.ಅಕ್ಷಯ್, ಕೆ.ಅಕ್ಷಯ್ ಮತ್ತಿತರರು ಇದ್ದರು.ಶಿಬಿರದಲ್ಲಿ ಒಟ್ಟು 105 ಜನ ಯುವಕ, ಯುವತಿಯರು ರಕ್ತದಾನ ಮಾಡಿದರು.