ಯಾದಗಿರಿ: ಜಿಲ್ಲಾ ಪಂಚಾಯತಿಯ ಅಧಿಕಾರಿಗಳು,ಸಿಬ್ಬಂದಿಯವರಿಂದ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಪ್ರತಿಜ್ಞೆ ಸ್ವೀಕಾರ

ಯಾದಗಿರಿ ಅಕ್ಟೋಬರ್ 26, ಯಾದಗಿರಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರ ಕಾರ್ಯಾಲಯದ ಮುಂದೆ ಯಾದಗಿರಿ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದರು.ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಪ್ರತಿಜ್ಞೆ ಬೋಧಿಸಿದರು.
ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ದಿನಾಂಕ 26.10.2021 ರಿಂದ 01.11.2021 ರ ವರೆಗೆ ಜಾಗೃತಿ ಅರಿವು ಸಪ್ತಾಹ ( vigilance Awareness week) ವನ್ನು ಆಚರಿಸುವಂತೆ ಕೇಂದ್ರ ವಿಚಕ್ಷಣಾ ಆಯೋಗವು ನೀಡಿದ ನಿರ್ದೇಶನಕ್ಕನುಗುಣವಾಗಿ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಜಾಗೃತಿ ಸಪ್ತಾಹ ಆಚರಿಸಿ,ಪ್ರತಿಜ್ಞೆ ಸ್ವೀಕರಿಸಲು ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಯವರು ಸುತ್ತೋಲೆ ಹೊರಡಿಸಿದ್ದರು. ಅದರಂತೆ ಜಿಪಂಯಲ್ಲಿಂದು ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಯರಗೋಳ,ಸಹಾಯಕ ಕಾರ್ಯದರ್ಶಿ ಜಹೀರ್ ಉಲ್ ಹಸನ್ ಮತ್ತು ಜಿಪಂಯ ಆಡಳಿತ,ಅಭಿವೃದ್ಧಿ,ಲೆಕ್ಕಶಾಖೆ,ನರೆಗಾ , ಯೋಜನಾ ಮತ್ತು ಪರಿಷತ್ ಶಾಖೆಗಳ ಅಧೀಕ್ಷಕರುಗಳು,ಸಿಬ್ಬಂದಿಯವರು ಪ್ರತಿಜ್ಞೆ ಸ್ವೀಕರಿಸಿದರು.