ಮಾನ್ವಿ: ಎಂ.ಬಿ.ಬಸಯ್ಯ ಸ್ವಾಮಿ‌ ನಿಧನ

ಎಂ.ಬಿ.ಬಸಯ್ಯ ಸ್ವಾಮಿ ಮಾನ್ವಿ

ಮಾನ್ವಿ  ಅ.26:- ತಾಲೂಕಿನ ಹಿರಿಯ ಪತ್ರಕರ್ತರಾದ ಎಂ.ಬಿ.ಸಿದ್ದರಾಮಯ್ಯ ಸ್ವಾಮಿ ಅವರ ಕಿರಿಯ ಸಹೋದರ ಎಂ.ಬಿ.ಬಸಯ್ಯಸ್ವಾಮಿ ( 49 ) ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ನಿಧನರಾದರು.

ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು, ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.  ಎಂ.ಬಿ.ಬಸಯ್ಯ ಸ್ವಾಮಿ ನಿಧನಕ್ಕೆ ಸ್ಥಳೀಯ ರಾಜಕೀಯ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಮಾನ್ವಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.