ಮಾನ್ವಿ ಅ.24: ಪಟ್ಟಣದ ಸರ್ವೋದಯ ಪ್ಯಾರಾಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ಮಾನವ ಹಕ್ಕುಗಳು, ಕಾನೂನು ಮತ್ತು ಸಾಮಾಜಿಕ ಕಲ್ಯಾಣಾಭಿವೃದ್ಧಿ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯಧ್ಯಕ್ಷ ಡಾ.ತಿಮ್ಮರಾಯಪ್ಪ.ಎಂ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಅಧ್ಯಕ್ಷರನ್ನಾಗಿ ವಿಜಯಚಾರ್ಯ ಇಬ್ರಾಂಪುರ ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ನಂತರ ರಾಜ್ಯಧ್ಯಕ್ಷ ಡಾ.ತಿಮ್ಮರಾಯಪ್ಪ.ಎಂ ಮಾತನಾಡಿ, ಸಂವಿಧಾನ ಬದ್ಧ ಮಾನವನ ಮೂಲಭೂತ ಹಕ್ಕುಗಳಾದ ಸ್ವಾತಂತ್ರ್ಯವಾಗಿ ಜೀವಿಸುವ ಹಕ್ಕು, ಶಿಕ್ಷಣ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕು, ಧಾರ್ಮಿಕ, ಸಾಂಸ್ಕೃತಿಕ, ಸಮಾನತೆಯ ಹಕ್ಕುಗಳ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಸಮಾಜದ ಬಡ ಹಿಂದುಳಿದ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆ ಮಾಡಲಾಗುತ್ತದೆ ಎಂದರು.
ನಂತರ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ನಾರಾಯಣಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಘನೆಯಿಂದ ಮನುಷ್ಯನಿಗೆ ಬೆಲೆ ಇಲ್ಲದಾಗಿದೆ. ಮಾನವನಿಗೆ ಅಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ ಈ ನಿಟ್ಟಿನಲ್ಲಿ ನಮ್ಮ ಸಂಘ ಬಡ ಮಧ್ಯಮ ವರ್ಗದ ಜನರ ಆರ್ಥಿಕ, ಸಮಾಜಿಕ ಅಭಿವೃದ್ಧಿಗಾಗಿ ಕೆಲಸಮಾಡಲಿದೆ ಎಂದರು.
ಸಭೆಯಲ್ಲಿ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅನೀಲ್ ಕುಮಾರ ಹೆಚ್, ಉಪಾಧ್ಯಕ್ಷರಾಗಿ ದತ್ತಾತ್ರೇಯ ಮೇಟಿ, ವೆಂಕಟೇಶ ಇಲ್ಲೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಮಾನ್ವಿ ತಾಲೂಕ ಅಧ್ಯಕ್ಷರಾಗಿ ಮನೋಜ್ ಕುಮಾರ ಮಿಶ್ರಾ, ಜಿಲ್ಲಾ ಕಾನೂನು ಸಲಹೆಗಾರರಾಗಿ ಎಂ.ಶಿವರಣಪ್ಪ ವಕೀಲರು ಹಾಗೂ ದೇವದುರ್ಗಾ ತಾಲೂಕ ಅಧ್ಯಕ್ಷರಾಗಿ ಹನುಮಂತರಾಯ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳು ಕಾನೂನು ಮತ್ತು ಸಾಮಾಜಿಕ ಕಲ್ಯಾಣಾಭಿವೃದ್ಧಿ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಶ್ರೀಕಾಂತ ಎಂ.ಕೋನಾಳ, ರೀಗನ್ ರಾಜ್ಯ ಅಧ್ಯಕ್ಷ ಕಲೆ ಮತ್ತು ಸಂಸ್ಕೃತಿ ವಿಭಾಗ, ಮುರಳಿ ಕಾರ್ಯಾಧ್ಯಕ್ಷ ಕೆ.ಆರ್.ಪುರಂ ಬೆಂಗಳೂರು, ನವಜೋತಿ ಸಹಕಾರ ಸಂಘದ ನಿರ್ದೇಶಕರು ರೇಖಾ ಪಾಟೀಲ್ ಉಪಸ್ಥಿತರಿದ್ದರು.