ಭಾನುವಾರದ ಗಜಲ್ ಘಮಲು – ಮಂಡಲಗಿರಿ ಪ್ರಸನ್ನ

ಗಜಲ್

*ಮಂಡಲಗಿರಿ ಪ್ರಸನ್ನ

ನನ್ನೆತ್ತರಕೆ ಬೆಳೆದ ಚೆಲುವೆ ಮಗಳು ನಾಳೆ ನಮ್ಮವಳಲ್ಲ
ಮುಂದೊಮ್ಮೆ ಬೇರೆಮನೆ ಮುಗುಳು ನಾಳೆ ನಮ್ಮವಳಲ್ಲ

ವಯಸು ಮೀರಿದ ಸಹನೆ ತಾಳ್ಮೆ ಬುದ್ಧಿ ಮಟ್ಟದವಳು ಕಲಿಸಿದ್ದಾಳವಳು ಜೀವನ ತಿರುಳು ನಾಳೆ ನಮ್ಮವಳಲ್ಲ

ಈ ಕಂದ ಭುವಿಗೆ ಬಂದುದು ಸಂವತ್ಸರಗಳ ಹಿಂದೆ ಹಾಲುಜೇನು ಹೊಳೆ ಹರಿಸಿದಳು ನಾಳೆ ನಮ್ಮವಳಲ್ಲ

ತಾಯಿ ಕರುಳಿನ ಹುಡುಗಿ ನಾಳೆ ಆ ಮನೆಯ ಬೆಳಕು
ಎದೆ ಮಂದಾಸನ ದೀಪ ಇವಳು ನಾಳೆ ನಮ್ಮವಳಲ್ಲ

ಹೊರಟು ನಿಲ್ಲುತ್ತಾಳೆ ಇನ್ನೇನು ಇಂದಲ್ಲ ನಾಳೆ ‘ಗಿರಿ’
ಕಣ್ಣರೆಪ್ಪೆಯಲೆ ನಕ್ಕು ಬಿಕ್ಕಿದವಳು ನಾಳೆ ನಮ್ಮವಳಲ್ಲ

ಮಂಡಲಗಿರಿ ಪ್ರಸನ್ನ, ರಾಯಚೂರು
ಮೊ:9449140580

One thought on “ಭಾನುವಾರದ ಗಜಲ್ ಘಮಲು – ಮಂಡಲಗಿರಿ ಪ್ರಸನ್ನ

  1. ತಂದೆ ಮತ್ತು ಮಗಳು ಈ ಎರಡು ಸಂಬಂಧಗಳು ಕಾರುಣ್ಯಕೆ ಹಿಡಿದ ಕನ್ನಡಿ… ಒಳ್ಳೆಯ ಚಿತ್ರಣ ಕಟ್ಟಿಕೊಟ್ಟಿದೆ ಈ ಗಜಲ್… ಹೌದು ಕಣ್ಣ ಮುಂದೆಯೇ ಬೆಳೆದ ಮಗಳು ಇನ್ನೊಂದು ಮನೆ ಬೆಳಗುವ ದೀಪ….ಅಭಿನಂದನೆಗಳು ಸರ್…

Comments are closed.