ಕಾವ್ಯಲೋಕ: ‘ಚಿತ್ತಾರ’ ಲಕ್ಷ್ಮೀ ಮಾನಸ ಅವರ ಕವನ

ಚಿತ್ತಾರ

          *ಲಕ್ಷ್ಮೀ ಮಾನಸ

ಹೇಳಬಲ್ಲೆಯಾ ಕಂದ..!
ತಾನರಿಯದೆ ರಂಗು ಬದಲಿಸುವ
ಈ ಗಗನದ ಚೆಲುವ
ನಿನ್ನೀ ತೊದಲು ನುಡಿಗಳಲ್ಲಿ,

ನೀಲಿ ಬಿಳಿಯ ರಂಗಿನಲ್ಲಿ
ರವಿಯ ಪೊರೆಯುತ,
ಶಶಿಯ ಆಗಮನಕ್ಕೆ,
ನೇಸರನ ಮರೆಯಾಗಿಸಿ,
ಕರಿಯ ಮಸುಕನು ಹೊದ್ದು,
ತಾನರಿಯದೆ ರಂಗು ಬದಲಿಸುವ
ಚೆಲುವ ವರ್ಣಿಸುವೆಯೇ ಕಂದಾ…,

ತನ್ನಳಲ ಧಾರೆಯಲಿ,
ಧರೆಗೆ ಹಸಿರ ಹಾಸಿಗೆಯ ಹೊದ್ದು,
ನಿಷಬ್ದವರಿಯದೆ ಘರ್ಜಿಸುವ,
ಶಬ್ದ ಅರಿತೆಯ ಕಂದಾ..?

ಮೌನ ತುಂಬಿದ  ಮನದಲ್ಲಿ,
ಮಾತನರಿಯದ ನಾವೆಯಲ್ಲಿ,
ಅರಿಯದ ಪಯಣ ನಡೆಸುವ,
ಗಗನದ ಗತಿ
ಬದಲಿಸುವೆಯಾ ಕಂದಾ..?

ಲಕ್ಷ್ಮೀ ಮಾನಸ, ಬಿ.ಎ ಅಂತಿಮ ವರ್ಷ, ಕಾರಟಗಿ