ಮಾನ್ವಿ ಅ.22: ಕರ್ನಾಟಕ ರಾಜ್ಯ ನದಾಪ್ ಪಿಂಜಾರ ಸಂಘ ಸ್ಥಾಪನೆಯಾಗಿ 25 ವರ್ಷಗಳಾಗಿದ್ದು, ಅ.24ರಂದು ಮಾನ್ವಿ ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಸಂಘದ ರಜತ ಮಹೋತ್ಸವ ಮತ್ತು ರಾಜ್ಯ ಮಟ್ಟದ ವಿಶೇಷ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ಕಲಬುರಗಿ ವಿಭಾಗೀಯ ಉಪಾಧ್ಯಕ್ಷ ಎಂ.ಡಿ.ಇಸ್ಮಾಯಿಲ್ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಂಜಾರ ಮತ್ತು ನದಾಫ್ ಸಮುದಾಯವು ರಾಜ್ಯದಲ್ಲಿ ಸುಮಾರು 25ಲಕ್ಷ ಜನಸಂಖ್ಯೆ ಹೊಂದಿದೆ.. ತೀವ್ರ ಹಿಂದುಳಿದ ಬಡ ಸಮುದಾಯವಾಗಿದ್ದು, ಅಭಿವೃದ್ಧಿಗಾಗಿ ರಾಜ್ಯದಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಬೇಕು’ ಎಂದರು.
ಸAಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಿಬೂಬ್ ಸಂತೆಕಲ್ಲೂರು, ಮಾನ್ವಿ ತಾಲ್ಲೂಕು ಅಧ್ಯಕ್ಷ ಹಬೀಬ್ ನದಾಫ್, ಸಿರವಾರ ತಾಲ್ಲೂಕು ಅಧ್ಯಕ್ಷ ಮೌಲಾಸಾಬ್ ಗಣದಿನ್ನಿ, ಖಾನ್‌ಸಾಬ್ ಪೋತ್ನಾಳ್, ಎಂ.ಡಿ.ರೆಹಮತ್ ಅಲಿ, ಶರೀಫ್ ಸಾಬ್, ಹಸನಸಾಬ್, ಬಾಷಾಸಾಬ್ ನಕ್ಕುಂದಿ ಇದ್ದರು.