ಕಾವ್ಯಲೋಕ: ರಾಮಕೃಷ್ಣ ಕಟ್ಕಾವಲಿ ಅವರ ಗಜಲ್

ಗಜಲ್

   *ರಾಮಕೃಷ್ಣ ಕಟ್ಕಾವಲಿ

ಭವಭಾವಗಳು ಭಕ್ತಿಯಲಿ ನಿನ್ನ ಪಾದಕೆ ಶರಣಾಗಿವೆ
ಎತ್ತಿಕೊಂಡರೆ ಬದುಕುವೆ ಹೊಸಕಿದರೆ ಇಲ್ಲವಾಗುವೆ

ಮಧು ಪಾತ್ರೆಯ ತುಂಬ ನೆನಪಿನ ಅಕ್ಷರಗಳು ಸಾಕಿ
ನಿನ್ನ ಹೆಸರಲಿ ಏಸೊಂದು ಪದಕಗಳು ನನ್ನ ಮುಡಿಗೇರಿವೆ

ಮನಮಯ್ಥುನ ಸುಖದ ಕನವರಿಕೆಯಲಿ ಮಯ್ ಬಸಿರು
ಗಾಂಧಾರಿ ಸಂಭ್ರಮ ಹೆರಿಗೆಯಲಿ ವೃಶ್ಚಿಕ ಚೂರಾಗಿವೆ

ಬಟ್ಟೆ ಬದಲಿಸಿದ ಪ್ರೀತಿ ಎದೆಯಲಿ ಮುರಿದಿದೆ ಬಾಣ
ವಾಸಿಯಾಗದ ಗಾಯ ಮುಲಾಮಗಳೇ ಸಾಯುತಿವೆ

ಮನಕನ್ನಡಿ ಒಡೆದು, ನಡೆದಿದೆ ಎಲ್ಲೆಡೆ ಪ್ರತಿಬಿಂಬಗಳ ನರ್ತನ
ಚಿಂತೆಯೇಕೆ ರಾಮ, ಥೂಕಾರದ ನೋವಲ್ಲೇ ಜಗದ ಕವಿತೆಗಳು ಹುಟ್ಟಿವೆ

ರಾಮಕೃಷ್ಣ ಕಟ್ಕಾವಲಿ
ಮೊ: 96324 32713

.