ಮಾನ್ವಿ ಅ.20: ದಿವಂಗತ ಡಾ.ವನಿತಾ ಪ್ರಭಾಕರ್ ಅವರ 25ನೇ ಪುಣ್ಯ ಸ್ಮರಣೆ ಪ್ರಯುಕ್ತ ಮಾನ್ವಿಯ ಡಾ.ವನಿತಾ ಪ್ರಭಾಕರ್ ಆಸ್ಪತ್ರೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಅ.25ರಂದು ಬೆಳಿಗ್ಗೆ 9.30ಕ್ಕೆ ಡಾ.ವನಿತಾ ಪ್ರಭಾಕರ್ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ರಕ್ತದಾನದಿಂದ ಹೊಸ ರಕ್ತ ಉತ್ಪಾದನೆ, ಜೀವದಾನ, ಸೃಜನಶೀಲ ಅಲೋಚನೆ.
ಮುಖದಲ್ಲಿ ತೇಜಸ್ಸು, ತೀಕ್ಷ್ಣ ಕಣ್ಣು ದೃಷ್ಟಿ , ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗಿ
ರೋಗಗಳು ಹೋರಗೋಗುತ್ತವೆ.
ನೆಮ್ಮದಿಯ ನಿದ್ದೆ, ನೆನಪಿನ ಶಕ್ತಿ ವೃದ್ಧಿ ಹಾಗೂವ
ಉತ್ತಮ ಆರೋಗ್ಯಕ್ಕಾಗಿ ರಕ್ತದಾನ ಅಗತ್ಯ.
ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಕಾಪಾಡಬಹುದು ಎಂದು ಶಿಬಿರದ ಕುರಿತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.