ಕಾವ್ಯಲೋಕ: ಕೋಣೆ-ಲಕ್ಷ್ಮೀ ಮಾನಸ

ಕೋಣೆ

    *ಲಕ್ಷ್ಮೀ ಮಾನಸ

ಕಿಟಕಿಯ ತೆರೆಯದೆ
ಬಾಳುತಿಹದೊಂದು ಗೊಂಬೆ,
ಕೋಣೆಯಲ್ಲಿ ಕೋಣೆಯ  ಕಟ್ಟಿ,
ಎಲ್ಲೆ ಮರಿಯದೇ
ವಿರಾಮವಿಲ್ಲದೆ ಹಾರಾಡುತಾ……

ಮನವರಿತ ಗೊಂಬೆಗಳಿಗೆ
ಕಾಲವ ಮರಿತು,
ಒಲವಿನ ಬಣ್ಣ
ಪೂಸುತಾ…..

ತೋರಿದ ಒಲವನ್ನು
ಅರಿಯದಾದರೆ ಗೊಂಬೆ
ಸರಿಯುವುದು ಮೆಲ್ಲ ಮೆಲ್ಲನೆ..
ಅಗಣಿತ ಮೈಲುಗಳಚೆಗೆ……

ಸಾಸಿರ
ಗೊಂಬೆಗಳೊಡನೆ ಬೆರೆಯಲಾಗದಿದ್ದರೂ.
ಸಂತಸ ಕಾಣುವುದು
ಕೋಣೆಯೊಳಗಿನ ಕೋಣೆಯಲ್ಲಿ….

ಕಿಟಕಿ ಹೊರಗಿನ ಗೊಂಬೆಗಳ ಕಂಡು,
ಕೋಣೆಯ ಸೊಬಗನ್ನರಿಯದೆ
ಅರಿತೂ ಕೋಣೆಯ ನಿಂದಿಸಿ,
ಅಸಹಜವೆಂದು ಬಿಂಬಿಸಿ,
ಬೆಂಕಿ ಕಿಡಿಗಳ ಎಸೆದರೆ,
ತನ್ನನ್ನರಿಯದಾದರೆಂದು
ರುಧಿರ ಸುರಿಸಿದ
ಕಂಗಳು
ಕೆಡವಬಲ್ಲವೇ
ಕೋಣೆಯೊಳಗಿನ ಕೋಣೆಯ….?

ತನ್ನ ಕೋಪಾಗ್ನಿಯ
ಮಂಜಿನ ಹನಿಯೊಳಗೆ ಅದ್ದಿ
ಕಟ್ಟುವುದು ಮತ್ತೊಂದು ಕೋಣೆ
ಕೋಣೆಯೊಳಗೆ ಕೋಣೆ,
ಕೋಣೆಯೊಳಗೆ ಕೋಣೆ,
ಜಗಕೆ ಕಾಣದ ಕೋಣೆ,
ಬಾಗಿಲು ಮುಚ್ಚಿದ ಕೋಣೆ…..

ಕಾಣದಾಯಿತು ಗೊಂಬೆಗಳಿಗೆ,
ಬಿರುಕು ಮೂಡುತ್ತಿರುವ
ಗೊಂಬೆಯ ಗಾಜಿನ ಹೃದಯ..
ಮರೆಯಾಗುವುದು ಈ ಜಗದಲಿ
ತನ್ನ ತಾ ತೊರೆಯುವ ಮುನ್ನ…..

ಲಕ್ಷ್ಮೀ ಮಾನಸ, ಬಿ.ಎ ಅಂತಿಮ ವರ್ಷ, ಕಾರಟಗಿ