““Winners Don’t do different Things, They do things Differently “
ನಿಮ್ಮ ಯಶಸ್ಸಿನ ಮೂರು ರಹಸ್ಯಗಳು ಯಾವತ್ತು ನೆನಪಿರಲಿ
1. ನಿಮ್ಮ ಮೇಲೆ ವಿಶ್ವಾಸ ವಿರಲಿ .
2.ದೊಡ್ಡ ಕನಸನ್ನು ಕಾಣುವುದು .
3. ಆ ಕನಸನ್ನು ನನಸು ಮಾಡುವ ಪ್ರ‍್ರಾಮಾಣಿಕ ಪ್ರಯತ್ನ .
1.ನಿಮ್ಮ ಮೇಲೆ ವಿಶ್ವಾಸ ವಿರಲಿ .
ನಿನ್ನನ್ನು ನೀನು ಅರಿತರೆ ಇಡೀ ವಿಶ್ವವನ್ನು ನೀನು ಅರಿತಂತೆ ಎನ್ನುವ ಹಾಗೆ ನಮಗೆ ನಮ್ಮಲ್ಲಿ ಅಡಕವಾಗಿರುವ ನಕರಾತ್ಮಕ ಮತ್ತು ಸಕರಾತ್ಮಕ ವಿಚಾರಗಳನ್ನು ಅರಿತಿರಬೇಕು. ನಮ್ಮದು ಯಶಸ್ವಿ ಜೀವನ ಆಗಬೇಕಾದರೆ ನಕರಾತ್ಮಕ ಧೋರಣೆಗಳನ್ನು ತೊಡೆದು ಹಾಕುತ್ತಾ ಸಕಾರತ್ಮಕ ವಿಚಾರಗಳನ್ನೇ ಅಳವಡಿಸಿಕೊಳ್ಳುತ್ತಾ ಸಾಗಬೇಕು ಅಭ್ಯಾಸದ ಕಡೆಗಮನ ಇಲ್ಲದಿರುವುದು , ಓದುವಾಗ ಉತ್ತರಗಳು ನೆನಪಾಗದಿರುವುದು, ಯಾವಗಲು ಮಲಗಬೇಕೆಂಬ ಆಸೆ ಎಲ್ಲರಿಗಿಂತ ನಾನೇ ಶ್ರೇಷ್ಠ ಎನ್ನುವುದು , ಮೇಲಿಂದ ಮೇಲೆ ಮೇಸೆಜ್ ನೋಡುವುದು ಇನ್ನೂ ಮುಂತಾದ ಸಮಸ್ಯೆಗಳಿಂದ ನಾವು ಬಳಲುತ್ತಾ ಇದ್ದೇವೆ .ಒಂದು ಮಾತು ನೆನಪಿರಲ್ಲಿ ನಮಗೆ ನಾವೇ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ನಾವು ಗೆದ್ದರೆ ದೊಡ್ಡ ಯಶಸ್ಸು ನಮಗೆ ಜೀವನದಲ್ಲಿ ಸಿಗುತ್ತದೆ.ಹಜರತ್ ಅಲಿ ಅವರು ಹೇಳಿರುವ ಹಾಗೆ “ ‘ “The best revenge is to improve Your Self “ ಪ್ರತಿಯೊಂದು ತೊಂದರೆಗೆ ನಾವು ಜವಾಬ್ದಾರರು ಇದಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ .ಎಲ್ಲವೂ ನಮ್ಮ ವ್ಯಕ್ತಿತ್ವವನ್ನು ಅವವಲಂಬಿಸಿದೆ. ಪ್ರತಿಯೊಂದು ನಾವು ನೋಡುವ ದೃಷ್ಟಿಯ ಮೇಲೆ ನಿಂತಿದೆ. ಹಾಸ್ಯಮಯ ಸನ್ನಿವೇಶ ನೆನೆಪಿಸಿಕೊಂಡು ನಾವು ನಗಬಹುದು. ಕೆಟ್ಟಘಟನೆಗಳನ್ನು ನೆನಪು ಮಾಡಿಕೊಂಡು ದುಃಖಿಸಬಹುದು ಆದೇ ರೀತಿ ಸಾಧಿದುವ ಕಿಚ್ಚು ಇದ್ದರೆ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಇಲ್ಲದಿದ್ದರೆ ನೀರಸ ಬದುಕು ನಮ್ಮದಾಗಿದೆ.
ಪ್ರಪಂಚದಲ್ಲಿ ಕೆಟ್ಟ ವ್ಯಕ್ತಿಗಳು ಯಾರು ಎಂದು ಪ್ರಶ್ನಿಸಿದರೆ ಹಿಟ್ಲರ್ , ಬಿನ್ ಲಾಡನ್, ವಿರಪ್ಪನ್ ಹೀಗೆ ನೀವು ಹಲವಾರು ಹೆಸರುಗಳನ್ನು ಹೇಳುತ್ತಾ ಹೋಗುತ್ತೀರಿ ,ಇದೇ ರೀತಿಯಲ್ಲಿ ಒಳ್ಳೇಯ ವ್ಯಕ್ತಿಗಳು ಯಾರು ಎಂದು ಹೇಳಿದಾಗ ನಮಗೆ ಹೊಳೆಯುವ ಹೆಸರುಗಳು ಗಾಂಧಿಜಿ , ಅಬ್ದುಲ್ ಕಲಾಂ , ಸ್ವಾಮಿ ವಿವೇಕಾನಂದ ಹಾಗೂ ಇತರರ ಹೆಸರು ಹೇಳಬಹುದು. ಆದರೆ ಉತ್ತಮ ವ್ಯಕ್ತಿಗಳ ಪಟ್ಟಿಯಲ್ಲಿ ಎಂದು ನಮ್ಮನ್ನು ಪರಿಗಣಿಸುವುದಿಲ್ಲ. ಯಾಕೆಂದರೆ ನಮ್ಮ ಬಗ್ಗೆ ನಮಗೆ ವಿಶ್ವಾಸ ಇರುವುದಿಲ್ಲ. ನಾವು ಒಳ್ಳೆಯವರು ಎಂಬ ಕಲ್ಪನೆ ನಮಗೆ ಇರದಿದ್ದರೆ ಬೇರೆಯವರು ನಮ್ಮನ್ನು ಹೇಗೆ ನಮಗೆ ಸ್ವೀಕರಿಸುತ್ತಾರೆ ಯೋಚಿಸಿ, ಈ ಹಿನ್ನಲೆಯಲ್ಲಿ ನಮ್ಮ ಮೇಲೆ ನಾವು ವಿಶ್ವಾಸ ಇಟ್ಟುಕೊಳ್ಳಾಬೇಕು. ನಾನು ಶೇಷ್ಠ ಎನ್ನುವುದು ಆತ್ಮವಿಶ್ವಾಸ ಆದರೆ, ನಾನೇ ಶ್ರೇಷ್ಠ ಎಂಬುದು ಅಹಂಕಾರವಾಗಲಿದೆ.
“ಸಾಯುವವರೆಗೆ ನಿಮ್ಮ ಮೇಲೆ ನಿಮಗೆ ಸದಾ ಇರಲಿ ವಿಶ್ವಾಸ….
ಅದೇ ನಿಮ್ಮ ಜೀವನದಲ್ಲಿ ಮಾಡಿರುವ ದೊಡ್ಡ ಸಾಹಸ”
2. ದೊಡ್ಡ ಕನಸು ಕಾಣುವುದು :
“ನಿಮ್ಮ ಜೀವನಕ್ಕೆ ನೀವೇ ರಾಜರು”
ದೇವರು ನಿಮಗೆ ಉಚಿತವಾಗಿ ಜೀವನ ನೀಡಿದ್ದಾನೆ
ನೀನು ಬೇರೆಯವರಿಗೆ ಗುಲಾಮನಾಗಿ ಬದುಕ ಬೇಡ”
ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಹೇಳಿರುವಂತೆ ದೊಡ್ಡ ಕನಸುಗಳನ್ನು ಕಾಣಿರಿ ಆ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು. ಕನಸು ಕಾಣಲು ನಾವು ಯಾವ ಹಣ ನೀಡುವ ಅಗತ್ಯವಿಲ್ಲ ಆದರೆ ಕಂಡ ಕನಸನ್ನು ನನಸು ಮಾಡಲು ನಾವು ಪ್ರ‍್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ .
ಒಂದು ಸಲ ಒಬ್ಬ ವಿದ್ಯಾರ್ಥಿ ಶ್ರೇಷ್ಠ ತತ್ವಜ್ಞಾನಿ ಸಾಕ್ರೇಟಿಸ್ ಹತ್ತಿರ ಬಂದು ಪ್ರಶ್ನೆ ಕೇಳುತ್ತಾನೆ, ನಾನು ಯಶಸ್ಸು ಕಾಣಬೇಕಾದರೆ ಏನು ಮಾಡಬೇಕು, ಆಗ ಸಾಕ್ರೇಟಿಸ್ ಆ ವಿದ್ಯಾರ್ಥಿಗೆ ನದಿಯ ದಡದ ಹತ್ತಿರ ಬರಲು ತಿಳಿಸುತ್ತಾನೆ ,ಅದರಂತೆ ಆ ವಿದ್ಯಾರ್ಥಿ ಬಂದು ಮತ್ತೇ ಪುನಃ ಅದೇ ಪ್ರಶ್ನೆಯನ್ನು ಸಾಕ್ರೇಟಿಸ್‌ಗೆ ಕೇಳಿದಾಗ, ಸಾಕ್ರೇಟಿಸ್ ಆ ವಿದ್ಯಾರ್ಥಿಗೆ ಬಾ ನದಿ ಕಡೆ ಹೋಗೋಣ ಎಂದು ನದಿಯ ಒಳಗಡೆ ಕರೆದುಕೊಂಡು ಹೋಗುತ್ತಾನೆ .ವಿದ್ಯಾರ್ಥಿಯು ಸಾಕ್ರೇಟಿಸ್‌ರ ಈ ವರ್ತನೆಯನ್ನು ಅರ್ಥ ಮಾಡಿಕೊಳ್ಳದೇ ನಾನು ನಿಮಗೆ ಯಶಸ್ಸು ಹೇಗೆ ಆಗಬೇಕೆಂದು ಕೇಳಿದ್ದೆ? ಆದರೆ ನೀವು ನನ್ನನ್ನು ನದಿಯ ನೀರಿನ ಅಳಕ್ಕೆ ಕರೆದುಕೊಂಡು ಹೋಗುತ್ತೀದ್ದಿರಿ ಏನಿದು ಎಂದು ಹೇಳುತ್ತೀರುವಾಗ ಸಾಕ್ರೇಟಿಸ್ ಆತನ ತಲೆಯ ಮೇಲೆ ಕೈ ಇಟ್ಟು ಜೋರಾಗಿ ಮುಳುಗಿಸುತ್ತಾನೆ ಆಗ ಆ ವಿದ್ಯಾರ್ಥಿ ನೀರಿನಲ್ಲಿ ಒದ್ದಾಡುತ್ತಾ ಮೇಲೆ ಬರಲು ಶತಾಯ ಗತಾಯ ಪ್ರಯತ್ನವನ್ನು ಮಾಡುತ್ತಾನೆ. ಆಗ ಸಾಕ್ರೇಟಿಸ್ ಆತನ ತಲೆಯಿಂದ ಕೈಯನ್ನು ತೆಗೆದಾಗ ವಿದ್ಯಾರ್ಥಿ ಮೇಲೆ ಬಂದು ಸಾಕ್ರೇಟಿಸ್ ಮೇಲೆ ಕೋಪಗೊಳ್ಳುತ್ತಾನೆ. ಸಾಕ್ರೇಟಿಸ್ ಆತನಿಗೆ ಒಂದು ಪ್ರಶ್ನೆ ಕೇಳುತ್ತಾನೆ, ನಾನು ನಿನಗೆ ನೀರಿನಲ್ಲಿ ಮುಳಗಿಸಿದಾಗ ನಿನಗೆ ಆ ಸಂದರ್ಭದಲ್ಲಿ ಬೇಕಾಗಿದ್ದ ವಸ್ತು ಯಾವುದು ಎಂದಾಗ ಆ ವಿದ್ಯಾರ್ಥಿ ಗಾಳಿ ಎಂದು ಹೇಳುತ್ತಾನೆ. ಈ ಉತ್ತರ ಬಂದ ನಂತರ ಸಾಕ್ರೇಟಿಸ್ ವಿದ್ಯಾರ್ಥಿಗೆ ನೀನು ನೀರಿನ ಒಳಗಡೆ ಇದ್ದಾಗ ಗಾಳಿಗಾಗಿ ಹೇಗೆ ಒದ್ಯಾಡುತ್ತೀದ್ದಿಯೋ ಹಾಗೇಯೇ ಜೀವನದಲ್ಲಿ ಪ್ರತಿ ಒಂದು ಕ್ಷಣ ನಾನು ಯಾಶಸ್ವಿಯಾಗಬೇಕು,ಗೆಲ್ಲಲೇಬೇಕೆಂಬ ಛಲ ನಿನ್ನಲ್ಲಿ ಇದ್ದರೆ ಆದೇ ಯಶಸ್ವಿನ ರಹಸ್ಯ.
ಈಗ ನಿಮ್ಮಲ್ಲಿ ನಿಧಾನವಾಗಿ ನಿಮ್ಮ ಬಗ್ಗೆ ವಿಶ್ವಾಮೂಡಿತ್ತಿದೆ ಎಂದು ಕೊಂಡಿದ್ದೇನೆ ,ಬನ್ನಿ ಈಗ ನಾಉವು ದೊಡ್ಡ ಕನಸು ಕಾಣುವುದು ಹೇಗೆ ಎಂಬುದನ್ನು ತಿಳಿಯೋಣ .ನಿಮಗೆ ಎಷ್ಟು ವೇತನÀವುಳ್ಳ ನೌಕರಿ ಬೇಕು ಎಂದು ಕೇಳಿದಾಗ ಬಹಳಷ್ಟು ಜನರ ಉತ್ತರ 20,40, 50ಸಾವಿರ ರೂಪಾಯಿ ಆಗೀರುತ್ತದೆ. ನಾವು ಈ ಸಮಯದಲ್ಲಿ 1 ಕೋಟಿ , 10 ಕೋಟಿ ಅಥವಾ 100 ಕೋಟಿ ಎಂದು ಹೇಳಬಹುದಿತ್ತು ಆದರೆ ಹೇಳುವುದಿಲ್ಲ ಯಾಕೆಂದರೆ ಇದು ನಮ್ಮ ಯೋಚನೆ ಮತ್ತು ಯೋಜನೆಗಳಲ್ಲಿನ ಕೊರತೆಯನ್ನು ತೋರಿಸುತ್ತೇ ಹಾಗಾಗಿ ನಾವು ದೊಡ್ಡದನ್ನು ಸಾಧಿಸಲು ಆಗುವುದಿಲ್ಲ ಆಕಾಶವನ್ನು ಗೆಲ್ಲುತ್ತೇನೆಂಬ ಕನಸನ್ನು ಇಟ್ಟುಕೊಳ್ಳಬೇಕು, ಕೊನೆ ಪಕ್ಷ ಚಂದ್ರನಲ್ಲಿ ಯಾದರೂ ಹೋಗಿ ಬರುತ್ತೇವೆ .
ನಿಮಗೆ ತಿಳಿದಿರಲಿ ಸುಂದರ್ ಬಿಚಾಯಿ ಗೋಗಲ್ ಸಿಇಓ ವೇತನ 25 ಕೋಟಿ 16 ಲಕ್ಷ ಇದೆ ,ಪ್ರತಿ ದಿನಕ್ಕೆ ಲೆಕ್ಕ ಹಾಕಿದಾಗ 1ಕೋಟಿ 66 ಸಾವಿರ , ಗಂಟೆಗೆ 12 ಲಕ್ಷ 58 ಸಾವಿರ ,ನಿಮಿಷಕ್ಕೆ ಅವನ ವೇತನ 20,972ರೂಪಾಯಿ ಸೆಕೆಂಡಿಗೆ 350 .ಈಗ ನೀವು ನಿರ್ಧರಿಸಿ ನಿಮ್ಮ ವೇತನ ಎಷ್ಟು ಇರಬೇಕೆಂದು ?
ಹಾಗಾಗಿ ದೊಡ್ಡ ಕನಸುಗಳನ್ನು ಕಾಣಿರಿ .
3.ಕನಸನ್ನು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ
ನಾವು ಜೀವನದಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಸೋಲು ಉಂಟಾಗುತ್ತದೆ. ಯಾಕೆಂದರೆ ನಮ್ಮ ಒಳಗೆ ಎರಡು ರೀತಿಯ ವ್ಯಕ್ತಿಗಳಿದ್ದಾರೆ, ಒಬ್ಬ ಮಾಡು ಎಂದರೆ ಮತ್ತೊಬ್ಬ ಬೇಡ ಎನ್ನುತ್ತಾನೆ. ನಾವು ಹೆಚ್ಚಾಗಿ ಬೇಡ ಎಂಬ ಕಡೆ ವಾಲುತ್ತೆವೆ, ಯಾಕೆಂದರೆ ಬೇಡ ಎಂಬ ಕಡೆ ಯಾವುದೇ ಪ್ರಯತ್ನದ ಅಗತ್ಯ ಇರುವುದಿಲ್ಲ. ಇದರಿಂದಾಗಿ ನಮಗೆ ಸೋಲು ಉಂಟಾಗುತ್ತದೆ.
ಒಂದು ತರಗತಿಯಲ್ಲಿ 100 ಜನ ವಿದ್ಯಾರ್ಥಿಗಳು ಇರುತ್ತಾರೆ ಅವರಲ್ಲಿ 5ಜನ ರ‍್ಯಾಂಕ್ , 10 ಜನ ಪ್ಲಸ್ಟ್ ಕ್ಲಾಸ್ , 20 ಜನ ಸೆಕೆಂಡ್ ಕ್ಲಾಸ್ ಉಳಿದೆವರೆಲ್ಲ ಅನುತ್ತೀರ್ಣರಾಗುತ್ತಾರೆ ಏಕೆ ? ತರಗತಿಯಲ್ಲಿ 100 ಜನರಿಗೆ ಮಾಡುವ ಪಾಠ ಒಂದೇ, ಸಿಲೆಬಸ್ ಒಂದೇ,ಪರೀಕ್ಷೆಯಲ್ಲಿ ಬರುವ ಪ್ರಶ್ನೇ ಪತ್ರಿಕೆ ಒಂದೇ, ಆದರೆ ಫಲಿತಾಂಶ ಬೇರೆ ಬೇರೆ ಯಾಕೇ ? ಇದಕ್ಕೆ ಮುಖ್ಯ ನಾವು ಅದನ್ನು ಸ್ವೀಕರಿಸುವ ರೀತಿಯಲ್ಲಿ ಅವಲಂಬಿಸಿದೆ ಪಾಠವನ್ನು ಸರಿಯಾಗಿ ಅವಲೋಕಿಸಿ ಏಕಾಗ್ರತೆಯಿಂದ ಕೇಳಿದಾಗ ನಾವು ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಇದರ ವಿರುದ್ಧ ಇದ್ದಾಗ ಫಲಿತಾಂಶವು ಸಹ ನಮ್ಮ ವಿರುದ್ಧವೇ ಬರುತ್ತದೆ. ಎಲ್ಲವೂ ನಮ್ಮ ಬುದ್ದಿಯ ನೆಟ್‌ವರ್ಕ್ನ ಮೇಲೆ ಅವಲಂಭಿತವಾಗಿರುತ್ತದೆ, ಉದಾಹರಣೆಗೆ, ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠಕೇಳುವಾಗ ತರಗತಿಯಲ್ಲಿ ಇದ್ದು “ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ” ಅಂದರೆ ಇದರ ಅರ್ಥ ತರಗತಿಯಲ್ಲಿ ಇದ್ದರೂ ನಿಮ್ಮ ಮನಸು ಬೇರೆ ಬೇರೆ ಕಡೆ ಇರುತ್ತದೆ. ಕೆಲವು ವಿದ್ಯಾರ್ಥಿಗಳ ಬುದ್ದಿಯ ನೆಟ್‌ವರ್ಕ್ ಸ್ವೀಚ್ ಆಫ್ ಎಂದು ತೋರಿಸುತ್ತದೆ ಅಂತಹ ವಿದ್ಯಾರ್ಥಿಗಳು ಪರೀಕ್ಷೇಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದರಿಂದ ನಿಮ್ಮ ನೆಟ್‌ವರ್ಕ್ ಯಾವಗಲು ಫುಲ್ ಇದ್ದಲ್ಲಿ ನೀವು ಕೋಟಿ ಜನರಲ್ಲಿ ನೀವು ಒಬ್ಬರಾಗಿ ನಿಮ್ಮದೇ ಆದ ಒಂದು ಇತಿಹಾಸ ರಚಿಸುತ್ತಿರಿ. ಅದೇ ನಮ್ಮ ಮನಸ್ಸು ಪಾಠದ ಕಡೆ ಇದ್ದು ನಿರಂತರ ಅಭ್ಯಾಸ ಮಾಡಿದಾಗ ಖಂಡಿತ ನಾವು ಯಶಸ್ವಿ ವ್ಯಕ್ತಿಗಳಲ್ಲಿ ಒಬ್ಬರಾಗುತ್ತೇವೆ ಹಾಗೂ ಹೊಸ ಇತಿಹಾಸವನ್ನು ನಿರ್ಮಾಣ ಮಾಡುತ್ತೇವೆ .
ಇನ್ನೊಂದು ಸರಳ ಉದಾಹರಣೆ ನೊಡೋಣ, ನಾವು ಯಾವುದೇ ಚಲನ ಚಿತ್ರ ನೋಡುವಾಗ ಅಥವಾ ಹಾಡನ್ನು ಕೇಳುವಾಗ ನಮಗೆ ಆ ಚಿತ್ರ ಮತ್ತು ಹಾಡು ನೆನಪಿರುತ್ತದೆ ಆದರೆ ತರಗತಿಯಲ್ಲಿ ಹೇಳುವ ಪಾಠ ಅಥವಾ ಪ್ರಶ್ನೆಗೆ ಉತ್ತರಗಳು ನೆನಪು ಆಗುವುದಿಲ್ಲ ಈ ಎರಡರ ನಡುವಿನ ವ್ಯತ್ಯಾಸ ನಮಗೆ ತಿಳಿದಾಗ ನಮಗೆ ಯಶಸ್ಸು ಸಿಗುತ್ತದೆ. ಒಟ್ಟಾರೆಯಾಗಿ ಯಶಸ್ಸು ಎಂಬುದು ನಾವು ಕಂಡ ಕನಸನ್ನು ಸಾಧಿಸಲು ಮಾಡುವ ನಿರಂತರ ಪ್ರಮಾಣಿಕ ಪ್ರಯತ್ನ ಎಂದಾಯಿತು.
ಆತ್ಮೀಯ ವಿದ್ಯಾರ್ಥಿಗಳೇ ಕನಸನ್ನು ನನಸು ಮಾಡಲು ನಿಮ್ಮ ಹೃದಯಲ್ಲಿ ಒಂದು ನೋವು ಇರಬೇಕೇ. ಏನು ಆಶ್ಚರ್ಯ ? ನೋವು ಎಲ್ಲಿಂದ ಬಂತು ಎಂದು ಕೊಂಡಿರಿ. ಹಾಗಾದರೆ ಈ ನೋವು ಎಲ್ಲಿಂದ ತರಬೇಕು ಎಂಬ ಪ್ರಶ್ನೆ ಎದುರಾಗಬಹುದು. ಬೇರೆ ಎಲ್ಲಿಂದ ಆ ನೋವನ್ನು ತರುವ ಅಗತ್ಯವಿಲ್ಲ ಪ್ರತಿಯೊಬ್ಬರಲ್ಲಿ ಅದು ಇದೆ .
ಆ ನೋವು ಯಾವುದು ಎಂದರೆ ಯಾವುದೇ ಸಂಬಳ ಇಲ್ಲದೆ , ಯಾವುದೇ ರಜೆ ತೆಗೆದುಕೊಳ್ಳದೇ , ಭಾನುವಾರ ಅಥವಾ ಅಥವಾ ಹಬ್ಬ ಬಂದಾಗ ಆ ನೋವಿನ ಕೆಲಸ ದ್ವಿಗುಣವಾಗುತ್ತದೆ ಈ ರೀತಿಯ ಕೆಲಸವನ್ನು ಮಾಡುವ ದೊಡ್ಡ ಪ್ರೇರಣಾ ಶಕ್ತಿ ಪ್ರತಿಯೊಬ್ಬರ ಜೊತೆ ಇದೆ. ಅದೇ ನಿಮ್ಮ ಜೀವನದಲ್ಲಿ ಅತ್ಯಂತ ಪ್ರೀತಿಸುವ, ಪೂಜಿಸೂವ ವ್ಯಕ್ತಿ ಎಂದರೆ (ನೋವು) ಅದುವೇ ನಮ್ಮ ನಿಮ್ಮ ತಾಯಿ..ಅಮ್ಮ..ಮ..ಮದರ್..ಅಮ್ಮಿ..
ಈಗ ಕೊಂಚ ಆಲೋಚಿಸಿ ಹೀಗೆ ಜೀವನದಲ್ಲಿ ಸಾಕಷ್ಟು ನೋವನ್ನು ಕಂಡರೂ ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ನನ್ನ ಕುಟುಂಬ ಚೆನ್ನಾಗಿರಬೇಕೆಂದು ಆಸೆ ಪಡುವ ಅದರಂತೆ ಪ್ರಯತ್ನ ಮಾಡುವ ದೇವರಂತೆ ಇರುವ ನಮ್ಮ ತಾಯಿ ಜೊತೆಯಲ್ಲಿರುವಾಗ ಹೇಗೆ ಸೋಲುತ್ತೀರಿ ? ನಮಗೆ ನಿಜವಾದ ಪ್ರೇರಣೆ ಮತ್ತು ಶಕ್ತಿ ನಮ್ಮ ಮನೆಯಿಂದಲೇ ಸಿಗುತ್ತದೆ ಅದು ನಮ್ಮ ತಾಯಿಯಿಂದ.
‘’‘’ if you touch mothers feet, success will touch your feet ‘’ ‘’
ನಿಮ್ಮ ಹೃದಯದಲ್ಲಿ ಒಂದು ನೋವು ತೆಗೆದುಕೊಳ್ಳಿ ಹೇಗೆಂದರೆ ನಿಮ್ಮ ತಂದೆ ತಾಯಿಯನ್ನು ನೋಡಿ ನಿಮ್ಮ ಕನಸಿಗಾಗಿ ಹಗಲು ರಾತ್ರಿ ದುಡಿಯುತ್ತಾರೆ ಅವರ ಮೈ ಮೇಲೆ ಇದ್ದ ಬಟ್ಟೆಗಳು ಕೊಳೊ ಇರುತ್ತವೆ , ತಾಯಿಯ ಹತ್ತಿರ 3-4ಸೀರೆಗಳು ಮಾತ್ರ ಇರುತ್ತವೆ. ಹಬ್ಬ ಹರಿದಿನಗಳು ಬಂದರೆ ಹೇಗಪ್ಪ ಮಾಡುವುದು ಎಂಬ ತೊಂದರೆಯಲ್ಲಿ ಇರುತ್ತಾರೆ ಆದರೂ ಸಹ ಇಷ್ಟೆಲ್ಲ ಕಷ್ಟದ ನಡುವೆಯು ನಮ್ಮ ಮುಂದೆ ನಗುವನ್ನು ಬೀರುತ್ತಾ ಸಾಧ್ಯವಾಷ್ಟು ಮಟ್ಟಿಗೆ ಉತ್ತಮವಾದ ವ್ಯವಸ್ಥೆಯನ್ನು ಮಾಡುತ್ತಾರೆ .ಏಕೆ ಇವರು ಹೀಗೆ ಎಂದು ನಾವು ಎಂದಾದರೂ ಒಮ್ಮೆ ಯೋಚಿಸಿವೆಯೇ ? ಏಕೆಂದರೆ ನಾವು ಚೆನ್ನಾಗಿ ಓದಿ ಮುಂದೆ ಯಶಸ್ವಿ ವ್ಯಕ್ತಿಗಳಾಗಿ ಉತ್ತಮ ಸ್ಥಾನದಲ್ಲಿ ಇರುತ್ತೇವೆ ಎಂಬ ಆಸೆಯಿಂದ .
ವಿದ್ಯಾರ್ಥಿಗಳೇ ನೀವು ಒಮ್ಮೆ ಅಲೋಚಿಸಿ ನಮಗಾಗಿ ಇಷ್ಟೆಲ್ಲ ಮಾಡುವ ತಂದೆ ತಾಯಿಯವರಿಗೆ ನಾವು ಎಂದಾದರೂ ಒಂದು ದಿನ ಅವರಿಗೆ ತಿಳಿಯದಂತೆ ಏನಾದರೂ ಕೊಡುಗೆಯನ್ನು ಕೊಟ್ಟಿದ್ದೇವೆಯೇ? ಯಾವತ್ತಾದರು ಅವರಿಗೆ ಊಟಕ್ಕಾಗಿ ಹೊರಗಡೆ ಕರೆದುಕೊಂಡು ಹೋಗಿದ್ದಿರಾ? ಯಾವ ದಿನದಲ್ಲಿ ಅವರ ಕಷ್ಟವನ್ನು ವಿಚಾರಿಸಿದ್ದೇವೆ ? ಕೊನೆ ಪಕ್ಷ ೧೦ ನಿಮಿಷವಾದರೂ ಪ್ರೀತಿಯಿಂದ ನಮ್ಮ ತಂದೆ ತಾಯಿಯವರ ಜೊತೆ ಮಾತನಾಡಿದ್ದೇವೆಯೇ ? ಹೇಗಿದ್ದಿಯಾ? ಊಟಮಾಡಿದ್ದಿಯಾ? ಏಕೆ ನಿನ್ನ ಮುಖ ಸುಸ್ತಾಗಿ ಕಾಣುತ್ತಿದೆಯಾ ಎಂದು ಕೇಳಿದ್ದಿರಾ? ನಿಮ್ಮ ಎದೆಯ ಮೇಲೆ ಕೈ ಇಟ್ಟು ಒಂದು ಸಾರಿ ಯೋಚಿಸಿ… ಇಲ್ಲ ತಾನೇ,
ನೋಡಿ ಆ ತಾಯಿಯ ತ್ಯಾಗ, ತಾಯಿ ಯಾವುದೇ ಮದುವೆ ಸಮಾರಂಭಗಳಲ್ಲಿ ಬಂಗಾರದ ಒಡವೆಗಳಿಲ್ಲದೇ, ಮದುವೆ ನಡೆವ ಸ್ಥಳದ ಒಂದು ಮೂಲೆಯಲ್ಲಿ ಕುಳಿತುಕೊಂಡು ಊಟಮಾಡಿಕೊಂಡು ಮನೆಗೆ ಬರುತ್ತಾಳೆ. ನಿಮ್ಮ ತಾಯಿಯನ್ನು ನಿಮ್ಮ ಕಡೆಯವರು ಹಲವು ಕಾರಣಗಳಿಂದ ಅವಳ ಮನಸ್ಸನ್ನು ನೋಯಿಸಿರುತ್ತಾರೆ ಆ ತಾಯಿಯನ್ನು ಒಂದು ಸಲ ದಿಟ್ಟಿಸಿ ನೋಡಿ ಅವಳಿಗೆ ಆಗುವ ನೋವುಗಳನ್ನು ನಿಮ್ಮ ಹೃದಯದಲ್ಲಿ ನಾಟಿಸಿಕೊಳ್ಳಿ, ನೋವಿಸುª ಜನಗಳ ಮತುಗಳನ್ನು ನಿಮ್ಮ ಮನದಲ್ಲಿ ತೆಗ್ಗುತೋಡಿ ಅದರಲ್ಲಿ ಊಣಿ ಹಾಕಿ. ಬರುವ ದಿನಗಳಲ್ಲಿ ನಿಮ್ಮ ತಂದೆ/ತಾಯಿಗೆ ಯಾರು ಎಷ್ಟು ನೋವು ನೀಡಿದ್ದಾರೆ ಅವರಿಗೆಲ್ಲಾ ನಿನ್ನ ಯಶಸ್ವಿಯೇ ಉತ್ತರ.
ತಾಯಿಯ ಎಲ್ಲ ನೋವುಗಳು ನಿಮ್ಮ ಯಶಸ್ವಿಗೆ ಕಾರಣವಾಗ ಬೇಕು. ನಿಮ್ಮ ಮನಸ್ಸು ಬೇರೆ ಕಡೆಹೋಗದಂತೆ, ಸಮಯ ವ್ಯಾರ್ಥಮಾಡದಂತೆ ಅಥವಾ ನಿಮ್ಮ ನೆಟ್‌ವರ್ಕ್ ನಾಟ್‌ರೀಚೇಬಲ್ ಆದಾಗ ಆ ತಾಯಿಯ ಕಷ್ಟಗಳನ್ನು ನೆನಪಿಸಿಕೊಳ್ಳಿ ಅಥವಾ ನಿಮ್ಮ ತಾಯಿಯ ಭಾವಚಿತ್ರವನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಿ ಅದನ್ನು ನೋಡಿ ಮತ್ತೆ ನಿಮ್ಮ ಮನಸ್ಸಿನಲ್ಲಿ ಸಾಧನೆ ಮಾಡಬೇಕೆಂಬ ಛಲ ಹುಟ್ಟುತ್ತದೆ. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ.
ನಮ್ಮ ತಾಯಿಗೆ ನಾವು ಎಷ್ಟು ಖುಷಿ ಕೊಟ್ಟರೂ ಸಾಲದು. ಅದು ಅವಳು ಮಾಡಿದ ಸಣ್ಣ ತ್ಯಾಗಕ್ಕೂ ಸಮ ಆಗಲಾರದು . ಬನ್ನಿ ವಿದ್ಯಾರ್ಥಿಗಳೆ ತಾಯಿ ಪಡುವ ಈ ಕಷ್ಟವನ್ನು ನಾವು ನೆನಪು ಮಾಡಿಕೊಳ್ಳೋಣ ,ನಾವು ಅವಳ ಸಂತೋಷಕ್ಕಾಗಿ ನಾವು ಕಂಡ ಕನಸನ್ನು ನನಸು ಮಾಡಿಕೊಳ್ಳೋಣ ಆಗ ನಾವು ನಿರೀಕ್ಷಿದ ಯಶಸ್ಸು ಸಿಗುತ್ತೆ.
“ನಿನ್ನಲ್ಲಿ ಅಡಗಿರುವ ಕೆಟ್ಟ ವಿಚಾರಗಳನ್ನು ಸಾಯಿಸು…
ದೇವರು ನೀಡಿರುವ ನಿನ್ನ ಜೀವನವನ್ನು ಹೃದಯ ಪೂರ್ವಕವಾಗಿ ಪ್ರೀತಿಸು…
ನಿನ್ನ ಮನದಲ್ಲಿ ಇರಲಿ ಒಂದು ದೊಡ್ಡ ಕನಸು…
ಜೀವನದ ಕೊನೆಯಲ್ಲಿ ನಿನಗೆ ಸೀಗುವುದು ೩ ಅಕ್ಷರಗಳ ಯಶಸ್ಸು…
ಇಂತಿ ನಿಮ್ಮ ಸದಾ ಯಶಸ್ಸು ಬಯಸುವ

ಸಹ ಪ್ರಾಧ್ಯಾಪಕರು
ಮುಖ್ಯಸ್ಥರು ಗಣಕ ಯಂತ್ರ ವಿಭಾಗ
ಪ್ರಥಮ ದರ್ಜೆ ಕಾಲೇಜು ರಾಯಚೂರು.
9845740444