ಗಜಲ್
✍️ ಅಭಿಷೇಕ ಬಳೆ ಮಸರಕಲ್
ಬಣ್ಣಮಾಸಿದ ಗುಲಾಬಿ ಪಕಳೆಗಳು ನನ್ನ ಜೊತೆ
ನೋವ ಹಡೆದ ತಬ್ಬಲಿ ಪದಗಳು ನನ್ನ ಜೊತೆ
ಕಾವಲಿಲ್ಲದ ಬೆಚ್ಚನೆ ಕನಸುಗಳು ನನ್ನ ಜೊತೆ
ಒಲವಿಂದ ಬೆಳಗದ ಹಣತೆಗಳು ನನ್ನ ಜೊತೆ
ಒಡೆದ ಮಧು ಬಟ್ಟಲುಗಳು ನನ್ನ ಜೊತೆ
ಅನುರಾಗವಿಲ್ಲದ ಹಾಡುಗಳು ನನ್ನ ಜೊತೆ
ಕೋಗಿಲೆ ಹಾಡದ ವಸಂತಗಳು ನನ್ನ ಜೊತೆ
ಬಯಲಿಗೆ ಬೆತ್ತಲಾದ ಶಿಶಿರಗಳು ನನ್ನ ಜೊತೆ
ಅಭಿ ಗೋರಿ ಮೇಲಿನ ಹೂಗಳು ನನ್ನ ಜೊತೆ
ಪ್ರೀತಿಯ ಮಧುರ ನೋವುಗಳು ನನ್ನ ಜೊತೆ

ಮೊ: 97399 75226