ಕಾವ್ಯಲೋಕ:ಸೂರ್ಯ ನಗುತ್ತಲೆ ಇದ್ದಾನೆ : ಡಾ. ಎಲ್. ಜಿ. ಗಗ್ಗರಿ

ಸೂರ್ಯ ನಗುತ್ತಲೆ ಇದ್ದಾನೆ

   *ಡಾ.ಎಲ್.ಜಿ.ಗಗ್ಗರಿ

1
ಸುಟ್ಟ ನೆತ್ತಿ ಉರಿದರೂ
ಒತ್ತಿ ಕರಕಲಾದರೂ
ಸೂರ್ಯ ನಗುತ್ತಲೆ ಇದ್ದಾನೆ.
ಕೆಳಮಾಳಿಗೆ ವಸುಂಧರೆಯ
ಒಂದೊಂದು ಸುತ್ತಲೂ
ಮುತ್ತಿನ ಸೊಲ್ಲು.
ಸೌಂದರ್ಯ ಅಚ್ಚೊತ್ತಿದ್ದಾಳೆ
ಸೀರೆ ಸೆರಗಿನಲಿ
ದುಂಡು ಮುಖದಲಿ.
2
ಅವನ ಸುಂದರ ನೋಟದ
ನಗುವಿನ ಕೆಂದುಟಿಯ
ಬಿಸಿಯನು ಹಿಮವಾಗಿಸಿ,
ಒತ್ತಿ ಕಚ್ಚಿ ಬಿಡಲೆ ಒಮ್ಮೆ…?
ಫಲ ದೇವತೆಯ ಕನಸಲಿ.
ಕಿಸು ನಗುವಳು
ರವಿಯ ಅರಸಿ
ಕೆಂಬಣ್ಣ ಕಿರಣವೀರ್ಯಕೆ
ಅಂಡಾಣುವಿನ ಗರ್ಭದ ತವಕವೆ..?
ಬಾಳು ಬೆಳಗಲು
ಜೀವ ಉಳಿಸಲು.

3
ಹಸಿರೊಡಲ ಬಾಣಂತಿಯ
ಹರಸಿ ಕೋಳಿ, ಕುರಿಗಳು ಮೇಯುತ್ತಿವೆ.
ಬಣ್ಣದ ಚಿಟ್ಟೆಗಳು, ಚಿಲಿಪಿಲಿ ಹಕ್ಕಿಗಳು ಹಾರುತ್ತಿವೆ.
ಬೆಳಸು ಬಯಸಿದ
ಜೀವ ರಾಶಿಗೆ ಅಚ್ಛೆದಿನ್.
ದಿಗಂತದಾಚೆಗೂ
ಸೂರ್ಯ ನಗುತ್ತಲೆ ಇದ್ದಾನೆ.

 

ಡಾ.ಎಲ್. ಜಿ. ಗಗ್ಗರಿ
ಉಪನ್ಯಾಸಕರು ಸ್ನಾತಕೋತ್ತರ ವಿಭಾಗ ಎಸ್. ವಿ. ಎಂ. ಕಾಲೇಜ್ ಇಲಕಲ್ಲ.
ತಾ.ಇಲಕಲ್ಲ. ಜಿ:ಬಾಗಲಕೋಟ
ಮೊ:.9845383015