ಕಾವ್ಯಲೋಕ: ಡಾ. ಶರೀಫ್ ಹಸಮಕಲ್ ಅವರ ಗಜಲ್ ‘ನೀನೇ ಕಾರಣ’

ಗಜಲ್‌

       ನೀನೇ ಕಾರಣ

                * ಡಾ.ಶರೀಫ್ ಹಸಮಕಲ್

ಆ ಮಮಕಾರದ ಒಲವಿನ ನಶಗೆ ನೀನೇ ಕಾರಣ
ಈ ಕರುಳಿನ ವಾತ್ಸಲ್ಯದ ಬೆಸುಗೆಗೆ ನೀನೇ ಕಾರಣ

ಚಳಿಗಾಲದ ಬಿಸಿ ಮುತ್ತೊಂದು ಕುಡಿಯೊಡೆದಿದೆ
ಅಂಗಳದಲ್ಲಿ ಕಿರಿಬೆರಳಿಡಿದ ಕೂಸಿಗೆ ನೀನೇ ಕಾರಣ

ಇರುಳೊಂದು ನೆನಪಿಟ್ಟಿದೆ ಕೋಟಿ ನಕ್ಷತ್ರದ ಹೊಳಪ
ಆ ಬೆಸುಗೆಯ ಒಲವಿನ ಚಲುವಿಗೆ ನೀನೇ ಕಾರಣ

ಜಗತ್ತು ಪ್ರತಿಬಾರಿಯೂ ಹೊಸದು ಮಧುಶಾಲೆಯಲ್ಲಿ
ಒಲುಮೆಯ ಧ್ಯಾನದ ಲೋಕದ ನುಡಿಗೆ ನೀನೇ ಕಾರಣ

ಇನ್ನೊಂದರ ಕುಣಿತಕ್ಕೆ ಗೆಜ್ಜೆ ಕಟ್ಟಿದರೆ ತಾಳಹೊಂದದು
ಶರೀಫಾ ನಿನ್ನ ಏರಿಳಿತದ ಬದುಕಿಗೆ ನೀನೇ ಕಾರಣ…

ಡಾ. ಶರೀಫ್ ಹಸಮಕಲ್
ಊರು ; ಹಸಮಕಲ್
ತಾಲೂಕು : ಮಸ್ಕಿ
ಜಿಲ್ಲೆ : ರಾಯಚೂರು
ಪೋನ್ ; 9480605552