ಮಗಳು
*ಶೋಭಾ ಸಿ.ಎಚ್
ತಾಯಿಯ ಪಟ್ಟವನು ನೀಡಿದವಳು,
ತಾಳ್ಮೆಯ ಪಾಠವನು ಕಲಿಸಿದವಳು,
ಕೋಪವನ್ನು ನಿಗ್ರಹಿಸಿದವಳು,
ಸುಂದರ ಕನಸುಗಳ ಬಿತ್ತಿದವಳು,
ಜೀವನೋತ್ಸಾಹ ತುಂಬಿದವಳು.
ಎಲ್ಲ ಸಾಧನೆಗೂ ಸ್ಪೂರ್ತಿ
ನನ್ನ ಕಣ್ಣ ಕಾಂತಿ,
ನಮ್ಮ ಮನೆಯ ಜ್ಯೋತಿ,
ಇವಳಿದ್ದೆಡೆ ನಗು ಜಾಸ್ತಿ,
ಇವಳಿಂದಲೇ ಮನೆಯ ಶಾಂತಿ.
ಅರಳು ಹುರಿದಂತೆ ಮಾತು;
ಶರಣಾದೆ ನಾ ಸೋತು.
ಇವಳಿಂದ ಅನುದಿನವು ಜನ್ಮಾಷ್ಟಮಿ;
ಇವಳೇ ಮನೆಗೆ ಸೂರ್ಯ ರಶ್ಮಿ.

ಸಹಾಯಕ ಪ್ರಾಧ್ಯಾಪಕರು,
ಇತಿಹಾಸ ವಿಭಾಗ,
ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾನ್ವಿ
ಜಿ; ರಾಯಚೂರು