ಕಾವ್ಯಲೋಕ: ಗುಂಡಪ್ಪ ರಾಠೋಡ್ ಅವರ ಕವನ ‘ನನ್ನಪ್ಪ’

ನನ್ನಪ್ಪ

              ಕವಿ: ಗುಂಡಪ್ಪ ರಾಠೋಡ್

ಸುಖದ ವ್ಯಾಪಾರಿ
ದೀಪದ ನೂಲು
ಮಳೆ ಬಿಸಿಲಿನ ಛತ್ರಿ | ನನ್ನಪ್ಪ
ನನ್ನ ಬದುಕಿನ ಚಮತ್ಕಾರ.

ಮೆತ್ತನೆಯ ಗಾದಿ
ಹೊತ್ತೋಡುವ ಗಾಡಿ
ಜೋಕಾಲಿ, ಜಾರುಬಂಡಿ | ನನ್ನಪ್ಪ
ನನ್ನ ಭವಿಷ್ಯದ ಗುರಿಕಾರ.

ತಾ ಹಸಿದು ನನ್ನುಣಿಸಿ
ತಾ ದಣಿದು ತಂಪ ನೀರ ಕುಡಿಸಿ
ಹೆಗಲ ಮೇಲೆ ಕೂಡಿಸಿ | ನನ್ನಪ್ಪ
ಪಾದಗಳ ಮುತ್ತಿಕ್ಕಿ ಆಡಿಸಿದ ಜೊತೆಗಾರ.

ಒಂದೆರಡು ಹೊತ್ತಿನ ಊಟ
ಹುರುಪಿನ ನೋವಿಲ್ಲದ ನೋಟ
ಏನನ್ನು ಕಮ್ಮಿ ಮಾಡಿದವನಲ್ಲ | ನನ್ನಪ್ಪ
ಹಗಲು ಇರುಳಿನ ಕೂಲಿಕಾರ.

ಬೆವರ ಹನಿ ಲೆಕ್ಕಿಸದ
ತನ್ನ ಹಿತವಾ ಬಯಸದ
ನನ್ನ ಖುಷಿಯೇ ತನಗೆ ಸುಖವೆಂದು | ನನ್ನಪ್ಪ
ನನ್ನ ಸಾಧನೆಯ ಕನಸುಗಾರ.

ಗುಂಡಪ್ಪ ರಾಠೋಡ್
ಸುಂಕೇಶ್ವರ ತಾಂಡಾ
ತಾ. ಮಾನ್ವಿ
ಜಿ.ರಾಯಚೂರು
ಸಹಶಿಕ್ಷಕರು ಉ.ಸ.ಹಿ.ಪ್ರಾ ಶಾಲೆ ಪುಲದಿನ್ನಿ
ಮೊ;8105994746

 

One thought on “ಕಾವ್ಯಲೋಕ: ಗುಂಡಪ್ಪ ರಾಠೋಡ್ ಅವರ ಕವನ ‘ನನ್ನಪ್ಪ’

Comments are closed.