ಮಾನ್ವಿ ಅ.9:
ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ವೆಂಕಟೇಶ ಯಾದವ್ ಅವರನ್ನು ನೇಮಕ ಮಾಡಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ ಯಾದವ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಉಮಾಶಂಕರ ಯಾದವ್ ಶನಿವಾರ ಬೆಂಗಳೂರಿನಲ್ಲಿ ಆದೇಶ ಹೊರಡಿಸಿದ್ದಾರೆ. ಸಂಘದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹನುಮಂತಪ್ಪ ಅವರ ನೇತೃತ್ವದಲ್ಲಿ ಈಚೆಗೆ ಮಾನ್ವಿಯಲ್ಲಿ ನಡೆದ ಯಾದವ ಸಮಾಜದ ಬಾಂಧವರ ಸಭೆಯಲ್ಲಿ ಅಧ್ಯಕ್ಷರನ್ನಾಗಿ ವೆಂಕಟೇಶ ಯಾದವ್ ಮತ್ತು ಇತರ ಪದಾಧಿಕಾರಿಗಳಆಯ್ಕೆಗೆ ಕೈಗೊಂಡ ನಿರ್ಣಯಕ್ಕೆ ರಾಜ್ಯ ಸಂಘ ಅನುಮೋದನೆ ನೀಡಿದೆ ಎಂದು ಅವರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಾಲೂಕು ಯಾದವ ಸಂಘವನ್ನ ಕರ್ನಾಟಕ ರಾಜ್ಯ ಗೊಲ್ಲ ( ಯಾದವ ) ಸಂಘದಲ್ಲಿ ಸಂಯೋಜನೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಅಧ್ಯಕ್ಷರ ಘೋಷಣೆಯಂತೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಯಾದವ ಸಂಘಕ್ಕೆ ಈ ತಿಂಗಳಲ್ಲಿ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಿ ಮಾನ್ವಿ ತಾಲೂಕು ಯಾದವ ಸಂಘವನ್ನ ಕರ್ನಾಟಕ ರಾಜ್ಯ ಗೊಲ್ಲ ( ಯಾದವ ) ಸಂಘಕ್ಕೆ ಘಟನೋತ್ತರ ಅನುಮೋದನೆ ನೀಡುವ ಷರತ್ತಿಗೆ ಒಳಪಟ್ಟು ಸಂಯೋಜನೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ ಯಾದವ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಉಮಾಶಂಕರ ಯಾದವ್ ತಿಳಿಸಿದ್ದಾರೆ.
