ನಾಳೆ ಡಾ ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರ ‘ಕೊಪ್ಪಳದ ಕಿಷ್ಕಿಂಧೆಯ ಅಂಜನಾದ್ರಿ ಪರ್ವತ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆ ಬಿಡುಗಡೆ

.                   ಕೊಪ್ಪಳ ಅ.೦೯: ಡಾ ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರ ‘ಕೊಪ್ಪಳದ ಕಿಷ್ಕಿಂಧೆಯ ಅಂಜನಾದ್ರಿ ಪರ್ವತ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆಯನ್ನು ಸಂಶೋಧಕರಾದ ಗಂಗಾವತಿಯ ಡಾ ಶರಣಬಸಪ್ಪ ಕೋಲ್ಕರ್‌ರವರು ದಿನಾಂಕ : ೧೦-೧೦-೨೦೨೧ರಂದು ಲೇಖಕರ ಸ್ವಗೃಹದಲ್ಲಿ ಬಿಡುಗಡೆಗೊಳಿಸಿಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡಾಯ ಸಾಹಿತಿಗಳಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರುರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ ಪೂಜಾರ, ಹಿರಿಯ ಸಾಹಿತಿಗಳಾದ ಎ.ಎಂ.ಮದರಿ, ಕವಿ ಶಿ.ಕಾ.ಬಡಿಗೇರ, ಪ್ರಾಧ್ಯಾಪಕರುಗಳಾದ ಪ್ರೊ.ಶರಣಬಸಪ್ಪ ಬಿಳಿಯಲಿ, ಡಾ.ಜಾಜಿ ದೇವೆಂದ್ರಪ್ಪ, ಪ.ಪೂ ಕಾಲೇಜಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸೋಮನಗೌಡ ಪಾಟೀಲ, ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾದ ಶ್ರೀ ರಾಜಶೇಖರ ಅಂಗಡಿ, ಜಿಲ್ಲಾ ಶ.ಸಾ.ಪ ಅಧ್ಯಕ್ಷರಾದ ಜಿ.ಎಸ್ ಗೋನಾಳ, ಬದಲಾವಣೆ ಪತ್ರಿಕಾ ಸಂಪಾದಕ ಮಂಜುನಾಥ ಗೊಂಡಬಾಳ ಆಗಮಿಸಲಿದ್ದಾರೆ. ಕಿರುಹೊತ್ತಿಗೆ ಗ್ರಂಥದಾನಿಗಳಾದ ಡಾ.ಮಹಾಂತೇಶ ಮಲ್ಲನಗೌಡರ ಹಾಗೂ ಲೇಖಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಉಪಸ್ಥಿತರಿರಲಿದ್ದಾರೆ. ಸಾಹಿತ್ಯಾಸಕ್ತರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮೇಘನಾ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ಮಂಜುಳಾ ಕೊಟ್ನೆಕಲ್ ಕೋರಿದ್ದಾರೆ.