ಮಾನ್ವಿ: ಕಲ್ಮಠ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ. ಸಾಧನೆಗೆ ಸತತ ಪ್ರಯತ್ನ, ಆತ್ಮವಿಶ್ವಾಸ ಅಗತ್ಯ: ರಮೇಶ ಬಲ್ಲಿದ

ಮಾನ್ವಿ ಅ.09:
ಜೀವನದಲ್ಲಿ ಉನ್ನತ ಸಾಧನೆಗೆ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸ ಅಗತ್ಯ  ಎಂದು ‘ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ರಮೇಶ ಬಲ್ಲಿದ ಹೇಳಿದರು.
ಶನಿವಾರ ಪಟ್ಟಣದ ಕಲ್ಮಠ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಹಾಗೂ ಉತ್ತಮ ವ್ಯಕ್ತಿತ್ವ  ಸಂಪಾದಿಸಿಕೊಂಡು  ಹೆತ್ತ ತಂದೆ ತಾಯಿಗಳಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು’ಎಂದು ಅವರು ಸಲಹೆ ನೀಡಿದರು. ಹೇಳಿದರು.
ಉಪನ್ಯಾಸಕ ರಮೇಶ ಬಾಬು ಯಾಳಗಿ ಮಾತನಾಡಿ, ವಿದ್ಯಾರ್ಥಿಗಳು ಸಕಾರಾತ್ಮಕ ಮನೊಭಾವ, ಅಧ್ಯಯನದಲ್ಲಿ ಏಕಾಗ್ರತೆ, ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಕಲ್ಮಠ ವಿದ್ಯಾಸಂಸ್ಥೆಯ ಪರವಾಗಿ ರಮೇಶ ಬಲ್ಲಿದ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕಲ್ಮಠದ ವಿರೂಪಾಕ್ಷ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿದ್ಯ ವಹಿಸಿದ್ದರು.
ಕಲ್ಮಠ ಪದವಿ ಕಾಲೇಜಿನ ಪ್ರಾಂಶುಪಾಲ ಸಿದ್ದನಗೌಡ ಪಾಟೀಲ್, ಕಲ್ಮಠ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪ್ರಭಯ್ಯಸ್ವಾಮಿ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಕಮತರ ವೇದಿಕೆಯಲ್ಲಿ ಇದ್ದರು.
ಉಪನ್ಯಾಸಕ ಹನುಮಂತಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕ ಉಮರ್ ದೇವರಮನಿ ನಿರೂಪಿಸಿದರು. ಉಪನ್ಯಾಸಕಿ ಗೌರಮ್ಮ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ವಿರುಪಣ್ಣ ಪಾಟೀಲ್ ವಂದಿಸಿದರು.