ತರಹಿ ಗಜಲ್
( ಮಿಶ್ರ : ಜಗದಲಿ ಏಕಾಂಗಿಯಾದರೂ ಅವಳನೇ ನೆನೆವುದೇಕೆ , ರವೀ ಹಂಪಿ)
ಜಗದಲಿ ಏಕಾಂಗಿಯಾದರೂ ಅವಳನೇ ನೆನೆವುದೇಕೆ
ಹಾಳಾದ ನೆನಪುಗಳ ಮರೆತರೂ ಅವಳನೇ ನೆನೆವುದೇಕೆ
ಕನಸುಗಳು ಬೂದಿಯಾದರೂ ಅವಳನೇ ನೆನೆವುದೇಕೆ
ಉಸಿರು ನಿಂತು ಹೋದರೂ ಅವಳನೇ ನೆನೆವುದೇಕೆ
ನೋವು ಎದೆಯ ತುಂಬಿದರೂ ಅವಳನೇ ನೆನೆವುದೇಕೆ
ವಿರಹ ಮನವ ಚುಚ್ಚಿದರೂ ಅವಳನೇ ನೆನೆವುದೇಕೆ
ಎಲ್ಲೊ ಬಳೆ ಸದ್ದಾದರೂ ಅವಳನೇ ನೆನೆವುದೇಕೆ
ಹಾಳು ಹೃದಯ ಕಂಪಿಸಿದರೂ ಅವಳನೇ ನೆನೆವುದೇಕೆ
ಸಾವು ಸನಿಹ ಬಂದರೂ ಅವಳನೇ ನೆನೆವುದೇಕೆ
ಅಭಿ ಮಣ್ಣಲ್ಲಿ ಮಣ್ಣಾದರೂ ಅವಳನೇ ನೆನೆವುದೇಕೆ

ಮೊ: 97399 75226
ಅಭಿಷೇಕ ಬಳೆ ಮಸರಕಲ್