ರಾಯಚೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ‌ ನವಭಾರತ ಮೇಳ ಕಾರ್ಯಕ್ರಮಕ್ಕೆ ಚಾಲನೆ’

ರಾಯಚೂರು,ಅ:5:ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅವರ 71ನೆಯ ಜನ್ಮದಿನ ಹಾಗೂ 20 ವರ್ಷಗಳ ರಾಷ್ಟ್ರ ಸಮರ್ಪಿತ ಸೇವೆಯ ಹಿನ್ನೆಲೆಯಲ್ಲಿ ಅವರ ಜೀವನ ಮತ್ತು ಸಾಧನೆಯ ಕುರಿತುಅ.5 ರಿಂದ7ರ ವರೆಗೆ ರಾಯಚೂರು ನಗರದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಜಂಬಣ್ಣ ಮಂದಕಲ್ ಅವರ ನೇತೃತ್ವದಲ್ಲಿ “ನವಭಾರತ ಮೇಳ”ಆಯೋಜಿಸಲಾಗಿದೆ. ಇಂದು ಈ ಮೇಳವನ್ನುಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯ ಅಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ್ ಅವರು ಉದ್ಘಾಟನೆ ಮಾಡಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರಮಾನಂದ್ ಯಾದವ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು .
ಈ ಕಾರ್ಯಕ್ರಮದ ಜಿಲ್ಲಾ ಉಪಾಧ್ಯಕ್ಷರಾದ ಕೆ ಎಮ್ ಪಾಟೀಲ್, ನರಸಿಂಹ ರಾವ್ ಕುಲಕರ್ಣಿ, ಸೀತಾ ನಾಯಕ್,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ರೆಡ್ಡಿ, ಹಾಗೂ ಮುಖ್ಯ ಅತಿಥಿಗಳಾದ ಡಾಕ್ಟರ್ ಬಸನಗೌಡ ಪಿ ಪಾಟೀಲ್, ಡಾ.ನಾಗರಾಜ ಬಾಲ್ಕಿ, ರಾಜಕುಮಾರ , ವಿಷ್ಣುವರ್ಧನ್ ರೆಡ್ಡಿ, ವಿಜಯ ಸಜ್ಜನ, ಶಂಕರ್ ಗೌಡ ಗ್ರಾಮಾಂತರ ಅಧ್ಯಕ್ಷರು, ಮೊಹ್ಮದ್ ಆಫ್ರೋಜ್ , ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಮನ ಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಶ್ ಕಲ್ಲೂರು, ಕಾರ್ಯಕ್ರಮದ ಸಂಚಾಲಕ ಎಸ್. ಅನಿಲ್ ಕುಮಾರ್, ಮಂಜು. ಪಿ. ಪಾಟೀಲ್, ದೇವರಾಜ್ ಗೌಡ, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರು ಸೀತಾ ನಾಯಕ, ಗಂಗೂ ಬಾಯಿ, ಮಹಿಳಾ ಜಿಲ್ಲಾ ಕಾರ್ಯಕಾರಣಿ ಸದ್ಯಸರು, ಶಾರದಾ ರಾತೋಡ್, ಪಾಪುರಾವ್ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಇತರ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.