
ರಾಯಚೂರು,ಅ3: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಯಚೂರು ಜಿಲ್ಲಾ ಉಸ್ತುವಾರಿಯನ್ನಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಹಾಗೂ ನಿರ್ದೇಶಕರಾದ ಮಿರ್ಜಾಪುರ ಮಹಾದೇವಪ್ಪ ಅವರನ್ನು ನೇಮಕ ಮಾಡಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ಸುಬ್ರಮಣ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರುಗಳನ್ನು ಸೇರಿಸಿಕೊಂಡು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪ್ರವಾಸಮಾಡಿ, ಜಿಲ್ಲಾ ಸಂಘದ ಪದಾಧಿಕಾರಿಗಳು , ನಿರ್ದೇಶಕರುಗಳು ಹಾಗೂ ತಾಲೂಕ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಒಳಗೊಂಡ ಪೂರ್ವಭಾವಿ ಸಭೆ ಕರೆದು, ಚರ್ಚಿಸಿ ಸಮಾಜದ ಸಂಘಟನೆ ದೃಷ್ಟಿಯಿಂದ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಶಾಖೆ , ತಾಲೂಕು ಶಾಖೆ ಹಾಗೂ ಯುವ ಘಟಕ , ಮಹಿಳಾ ಘಟಕ ಹಾಗೂ ಇನ್ನಿತರ ಶಾಖೆಗಳನ್ನು ರಚನೆ ಮಾಡಿ ಒಂದು ತಿಂಗಳ ಅವಧಿಯೊಳಗೆ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಕಳುಹಿಸಿ, ಕೇಂದ್ರ ಸಂಘದ ಅನುಮೋದನೆಯನ್ನು ಪಡೆಯಬೇಕು. ಜಿಲ್ಲೆಯಲ್ಲಿರುವ ಸಮಾಜದ ಆಸ್ತಿಗಳ ವಿವರ ಹಾಗೂ ಕನಕ ಭವನ ಕಟ್ಟಡಗಳನಿರ್ಮಾಣದ ಮಾಹಿತಿಯನ್ನು ಸಂಗ್ರಹ ಮಾಡಿ ಕೇಂದ್ರ ಸಂಘಕ್ಕೆ ಕಳುಹಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.