ಮಾನ್ವಿ; ರಾಬಿತ-ಏ-ಮಿಲ್ಲತ್ ಸಂಸ್ಥೆಯ 2ನೇ ವಾರ್ಷಿಕ ಸಮಾರಂಭ

ಮಾನ್ವಿ; ‘ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ಕೆಳವರ್ಗದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ವಿವಿಧ ಸಮುದಾಯಗಳು ಒಗ್ಗಟ್ಟಾಗಬೇಕಿದೆ’ ಎಂದು ರಾಬಿತ-ಏ-ಮಿಲ್ಲತ್ ನ ರಾಜ್ಯ ಸಂಚಾಲಕ ಮೌಲಾನಾ ಯೂಸುಫ್ ಕನ್ನಿ ಬೆಂಗಳೂರು ಹೇಳಿದರು.
ಶನಿವಾರ ಮಾನ್ವಿ ಪಟ್ಟಣದ ಈದ್ಗಾ ಶಾದಿಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಬಿತ-ಏ-ಮಿಲ್ಲತ್ ನ 2ನೇ ವಾರ್ಷಿಕ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.’

‘ಇಂದು ದೇಶದ ಸಾರ್ವಜನಿಕರಲ್ಲಿ ದ್ವೇಷ ಅಸೂಯೆ ಮತ್ತು ಅಸಹನೆ ಬಿತ್ತುವ ಕೆಲಸ ಆಗುತ್ತಿದೆ. ಸದೃಢ ಸಮಾಜ ಕಟ್ಟುವ ನಿಟ್ಟಿನಲ್ಲಿ ಎಲ್ಲಾ ಧರ್ಮೀಯರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕಾಗಿದೆ. ಸಮಾಜದ ಬಡವರು, ದೀನದಲಿತರು ಮತ್ತು ತುಳಿತಕ್ಕೆ ಒಳಗಾದ ವರ್ಗಗಳ ಏಳಿಗೆಗಾಗಿ, ಕೆಲಸ ಅನಾಥ ಮಕ್ಕಳು, ವಿಧವೆಯರು ಮತ್ತು ವೃದ್ಧರ ಸೇವೆ ಮಾಡುವ ನಿಟ್ಟಿನಲ್ಲಿ ರಾಬಿತ-ಏ-ಮಿಲ್ಲತ್ ಸ್ಥಾಪನೆಯಾಗಿದೆ’ ಎಂದು ಅವರು ಹೇಳಿದರು. ‘ರಾಬಿತ-ಏ-ಮಿಲ್ಲತ್ ಮಾನ್ವಿ ಘಟಕವು ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಮಾಜದ ಪ್ರತಿಯೊಬ್ಬ ವ್ಯಕ್ತಿ ರಾಬಿತ-ಏ-ಮಿಲ್ಲತ್ ವೇದಿಕೆ ಗೆ ಸಹಕರಿಸಬೇಕು’ ಎಂದು ಅವರು ಮನವಿ‌ ಮಾಡಿದರು.

ನಂತರ ಪಟ್ಟಣದ ವಿವಿಧ ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಮಾತನಾಡಿದರು. ಅಗಲ ಸುನ್ನತ್ ಜಮಾತ್ ನ ಮುಖಂಡ ಸೈಯದ್ ಸಜ್ಜಾದ್ ಹುಸೇನ್ ಮತ್ವಾಲೆಗುರು, ಮಹದವಿಯಾ ಜಮಾತ್ ನ ಗುರುಗಳಾದ ಸೈಯದ್ ಮುಸ್ತಫಾ ಮಿಯಾ ಮುರ್ಶದ್, ತಬ್ಲೀಗಿ ಜಮಾತ್ ಮತ್ತು ಜಮಿಯತುಲ್ ಉಲಮಾ ಸಂಘಟನೆಯ ಗುರುಗಳು ಮೌಲಾನಾ ಮುಫ್ತಿ ಸೈಯದ್ ಹಸನ್ ಜೀಶಾನ್ ಖಾದ್ರಿ ಖಾಸ್ಮಿ, ಜಮಾತೇ ಇಸ್ಲಾಮಿ ಹಿಂದ್ ನ ಜಿಲ್ಲಾ ಸಂಚಾಲಕ ಮೌಲಾನಾ ಅನ್ವರ್ ಪಾಷ ಉಮರಿ, ಅಹಲ್ಯಾ ಹದೀಸ್ ಜಮಾತ್ ನ ಮೌಲಾನಾ ಇಮ್ರಾನ್ ಮೊಹಮ್ಮದಿ ಹಾಗೂ ರಾಬಿತ-ಏ-ಮಿಲ್ಲತ್ ನ ಅಧ್ಯಕ್ಷ ರಾದ ಸೈಯದ್ ಅಕ್ಬರ್ ಪಾಷ ರವರು ಮಾತನಾಡಿದರು.
ನಂತರ ಕೊವಿಡ್-19 ಸಂದರ್ಭದಲ್ಲಿ ರಾಬಿತ-ಏ-ಮಿಲ್ಲತ್ ಜೊತೆಗೆ ಕೈಜೋಡಿಸಿ ಕೊವಿಡ್ ಸೋಂಕಿತರ ಸೇವೆಗಾಗಿ ತಮ್ಮ ಆಂಬುಲೆನ್ಸ್ ಉಚಿತ ವಾಗಿ ನೀಡಿದ ಡಾ.ರೋಹಿಣಿ ಜಗನ್ನಾಥ ಮಾನ್ವಿಕರ್ , ಡಾ. ಅರುಣ್ ಮಸ್ಕಿ, ಡಾ. ಬಾಸಿತ್ ಲತೀಫ್ ಹಾಗೂ ಉತ್ತಮ ರೀತಿಯಲ್ಲಿ ರಾಬಿತ-ಏ-ಮಿಲ್ಲತ್ ಜೊತೆ ಕಾರ್ಯನಿರ್ವಹಿಸಿದ ಡಾ.ಆಸಿಫ್ ಮತ್ತು ಸ್ವಯಂ ಸೇವಕರಾಗಿ ರೋಗಿಗಳ ಸೇವೆ ಸಲ್ಲಿಸಿದ ಜಾವಿದ್,ಲಾಲ ಮಿಯಾ ಮತ್ತು ಸೈಯದ್ ಅರ್ಷದ್ ಇವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಪುರಸಭೆ ಸದಸ್ಯ ಫರೀದ್ ಉಮರಿ ಪ್ರಾಸ್ತಾವಿಕ ಭಾಷಣ ಮಾಡಿದರು ಎಮ್ ಎ ಎಚ್ ಮುಖೀಮ್ ನಿರೂಪಿಸಿದರು ಸಾಬಿರ್ ಪಾಷ ಧನ್ಯವಾದಗಳನ್ನ ಅರ್ಪಿಸಿದರು.
ವೇದಿಕೆಯಲ್ಲಿ ಮುಸ್ಲಿಮ್ ಸಮಾಜದ ಮುಖಂಡರುಗಳು, ಎಲ್ಲಾ ಮಸೀದಿ ಗಳ ಅಧ್ಯಕ್ಷರು, ಸಮಾಜದ ಪುರಸಭಾ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಈದ್ಗಾ ಕಮಿಟಿ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಸಮಾಜದ ಮುಖಂಡರಾದ ರಫೀ ಸಾಹುಕಾರ, ನಸೀರ್ ಸಾಹುಕಾರ, ನಿಜಾಮ್ ಪಾಷ, ಯದುಲ್ಲ ಹುಸೇನಿ ಮತವಾಲೆ ವಕೀಲ, ಸೈಯದ್ ಆರಿಫ್ ಖಾದ್ರಿ ,ಖಲೀಲ್ ಖುರೇಶಿ, ಜೀಲಾನಿ ಖರೇಶಿ, ಸಾಬಿರ್ ಪಾಷ ಇಬ್ರಾಹೀಂ ಖುರೇಶಿ, ಸುಪ್ರೀಂ ಟೇಲರ್, ಜಮಾತೆ ಇಸ್ಲಾಮ್ ಅಧ್ಯಕ್ಷ ಕರೀಮ್ ಖಾನ್,ಮತ್ತು ರಾಬಿತ-ಏ-ಮಿಲ್ಲತ್ ನ ಪದಾಧಿಕಾರಿಗಳಾದ ಸಾದಿಕ್ ಪಾಷ ಬಾಬುಲ್, ಸಿರಾಜುದ್ದೀನ್ ಖಾದ್ರಿ, ಮೌಲಾನ ಸಿಕಂದರ್,ಮೊಹಮ್ಮದ್ ಸಲೀಮ್, ಯೂಸುಫ್ ಖಾನ್, ಪುರಸಭೆ ಸದಸ್ಯ ಹುಸೇನ್ ಬಾಷ ಹೆಚ್ ಬಿ ಎಮ್ , ಮಾನ್ವಿ ಐಡಿಯಲ್ ಗ್ರೂಪ್ ನ ಪದಾಧಿಕಾರಿಗಳು ಎಸ್ ಐ ಓ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.