ಉತ್ತಮ ಸಮಾಜ ಸೇವಕಿ ಪ್ರಶಸ್ತಿಗೆ ಮಲ್ಲಮ್ಮ ಉಟಕನೂರು ಅಯ್ಕೆ

ಮಲ್ಲಮ್ಮ ಉಟಕನೂರು

ಮಾನ್ವಿ: ತಾಲೂಕಿನ ಉಟಕನೂರು ಗ್ರಾಮದ ಶ್ರೀ ಮತಿ ಮಲ್ಲಮ್ಮ ಅವರು ರಾಯಚೂರಿನ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ (ರಿ) ನೀಡುವ ಉತ್ತಮ ಸಮಾಜ ಸೇವಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀಮತಿ ಮಲ್ಲಮ್ಮ ಅವರು ಮಾನ್ವಿ ತಾಲೂಕಿನ ಪ್ರಸಿದ್ಧ ಧಾಮಿ೯ಕ ಕ್ಷೇತ್ರವಾದ ಉಟಕನೂರು ಗ್ರಾಮದವರಾಗಿದ್ದು, ಸಾಂಸಾರಿಕವಾಗಿ ನೊಂದು, ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಮೆಟ್ಟಿ ನಿಂತು, ಸಮಾಜ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.

2009ರಿಂದ ಪೋತ್ನಾಳದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಲ್ಯವಿವಾಹ ಪದ್ಧತಿ ಬಾಲಕಾಮಿ೯ಕ ಪದ್ಧತಿ ಹಾಗೂ ಮಾನವ ಕಳ್ಳ ಸಾಗಣೆ ವಿರುದ್ಧ ಜಾಗೃತಿ ಕಾರ್ಯಕ್ರಮಗಳು, ಮಕ್ಕಳ ಕಾವಲು ಸಮಿತಿ ಮತ್ತು ಗ್ರಾಮಾಭಿವೃದ್ಧಿ ಸಮಿತಿ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ, ಮಕ್ಕಳ ಹಕ್ಕುಗಳ ಗ್ರಾಮಸಭೆ ಹಾಗೂ ಮಹಿಳಾ ಸಂಘಗಳನ್ನು ಬಲಗೊಳಿಸುವ ಚಟುವಟಿಕೆಗಳಲ್ಲಿ ಮಲ್ಲಮ್ಮ ಅವರು 7ವಷ೯ಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ನಂತರ ಸಮೂಹ ಸಂರಕ್ಷಾ ಸಂಸ್ಥೆಯ ಮೂಲಕ ಸಿಂಧನೂರಿನಲ್ಲಿ ಎಚ್ ಐ ವಿ ರೋಗಕ್ಕೆ ತುತ್ತಾದ ಜೀವಗಳ ಜೊತೆಯಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮತ್ತು ಸಮೃದ್ಧಿ ಸೇವಾ ಸಂಸ್ಥೆಯಲ್ಲಿ ಸಿಂಧನೂರು ತಾಲೂಕಿನ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಅಕ್ಷರದ ಅರಿವು ಮೂಡಿಸುವದು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮ, ಬೆಂಗಳೂರಿನ ಅಪ್ಸಾ ಸಂಸ್ಥೆಯ ಬಾಲಮಂದಿರದಲ್ಲಿ ಆಶ್ರಯ ಪಡೆದ ಮಕ್ಕಳಿಗೆ ಅಪ್ತ ಸಮಾಲೋಚನೆ ಮತ್ತು ಜೀವನ ಕೌಶಲ್ಯಗಳ ತರಬೇತಿ, ಕಾರುಣ್ಯ ವೃದ್ಧಾಶ್ರಮದಲ್ಲಿ ವೃದ್ದರಿಗೆ ನೆರವಾಗುವಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಿಂಧನೂರಿನ ಕೆ.ನಾಗಪ್ಪ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಸ್ಪಧಾ೯ತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳ ಜ್ಞಾನಾಜ೯ನೆಗೆ ಬೇಕಾಗುವ ಅಗತ್ಯ ಪುಸ್ತಕಗಳ ವಿತರಣೆ, ನಿರುದ್ಯೋಗಿ ಯುವಕ ಯುವತಿಯರಿಗೆ ಟೈಲರಿಂಗ್ ಹಾಗೂ ಕಂಪ್ಯೂಟರ್ ತರಬೇತಿ, ರೈತರಿಗೆ ಕೃಷಿ ಪರಿಕರಗಳ ವಿತರಣೆಯಲ್ಲಿ ನೆರವಾಗುತ್ತಿದ್ದಾರೆ. ಹಲವು ರೈತಪರ ಹೋರಾಟಗಳಲ್ಲಿಯೂ ಅವರು ಭಾಗವಹಿಸಿದ್ದಾರೆ. ಹೀಗೆ ಸತತವಾಗಿ 14ವಷ೯ಗಳ ಕಾಲ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ

ಇವರ ಸಮಾಜ ಸೇವೆಯನ್ನು ಗುರುತಿಸಿ ರಾಯಚೂರಿನ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ (ರಿ) ಉತ್ತಮ ಸಮಾಜ ಸೇವಕಿ ಪ್ರಶಸ್ತಿಗೆ ಅಯ್ಕೆ ಮಾಡಿದೆ. ಸಂಗೀತ ಕ್ಷೇತ್ರ, ರಂಗಭೂಮಿ, ರಕ್ತದಾನ, ಸಮಾಜ ಸೇವಾ ಕ್ಷೇತ್ರ, ಶಿಕ್ಷಣ ಕ್ಷೇತ್ರ , ಬಯಲಾಟ, ಭರತನಾಟ್ಯ ಕ್ಷೇತ್ರ ಸೇರಿದಂತೆ ಒಟ್ಟು 13.ಕ್ಷೇತ್ರಗಳ ಸಾಧಕರಿಗೆ ರಂಗಸಿರಿ ಪ್ರಶಸ್ತಿ ಪ್ರದಾನ ಹಾಗೂ ಕಲಾಪೋಷಕರಿಗೆ ಸನ್ಮಾನ ಕಾಯ೯ಕ್ರಮವನ್ನು ರಾಯಚೂರು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದಿನಾಂಕ ಅ.3ರಂದು ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಶ್ರೀಮತಿ ಮಲ್ಲಮ್ಮ ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕಾಗಿ ಗ್ರಾಮಸ್ಥರು, ಸಹಪಾಠಿಗಳು, ಸಿಂಧನೂರಿನ ಕೆ ನಾಗಪ್ಪ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಹಷ೯ ವ್ಯಕ್ತಪಡಿಸಿದ್ದಾರೆ.