ಮಾನ್ವಿ: ನೂತನ ನ್ಯಾಯಾಲಯ ಕಟ್ಟಡ ಉದ್ಘಾಟನೆಗೆ ಕ್ರಮ: ಅಶೋಕ ಕಿಣಗಿ

ಮಾನ್ವಿ:
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯ ಕಟ್ಟಡದ ಉದ್ಘಾಟನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಅಶೋಕ ಕಿಣಗಿ ಹೇಳಿದರು.
ಶನಿವಾರ ಮಾನ್ವಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯ ಕಟ್ಟಡವನ್ನು ಸ್ಥಳೀಯ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳ ಜತೆಗೆ ಭೇಟಿ ನೀಡಿ ಅವರು ವೀಕ್ಷಿಸಿದರು. ‘ನೂತನ ಸುಸಜ್ಜಿತ ಕಟ್ಟಡದಿಂದ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದರು. ಮಾನ್ವಿ ತಾಲ್ಲೂಕಿನಲ್ಲಿ 614 ಸಿವಿಲ್ ಹಾಗೂ 2,295 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಳ್ಳಲು ಬಾಕಿ ಇದ್ದು ಹೆಚ್ಚುವರಿಯಾಗಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮಂಜೂರು ಮಾಡಲು ವಕೀಲರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ಈ ಕುರಿತು ಹಿರಿಯ ನ್ಯಾಯಾಧೀಶರ ಜತೆ ಚರ್ಚಿಸಿ ಕಾಯಂ ಹಿರಿಯ ಸಿವಿಲ್ ನ್ಯಾಯಾಧೀಶರ ನೇಮಕ ಮಾಡಲಾಗುವುದು ಎಂದು ಅಶೋಕ ಕೇಣಗಿ ತಿಳಿಸಿದರು. ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಪಾಟೀಲ್, ನ್ಯಾಯಾಧೀಶ ವಿಜಯಕುಮಾರ ಎಸ್.ಹಿರೇಮಠ, ಸರ್ಕಾರಿ ಅಭಿಯೋಜಕಿ ಅರ್ಚನಾ ಹನುಮೇಶ, ಹಿರಿಯ ವಕೀಲರಾದ ಎ.ಬಿ.ಉಪ್ಪಳಮಠ, ಗುಮ್ಮಾ ಬಸವರಾಜ, ವಕೀಲರ ಸಂಘದ ಕಾರ್ಯದರ್ಶಿ ರವಿಕುಮಾರ ಪಾಟೀಲ್, ಖಜಾಂಚಿ ಚಂದ್ರಶೇಖರ ಮದ್ಲಾಪೂರ, ಉಪಾಧ್ಯಕ್ಷ ಯಲ್ಲಪ್ಪ ನಾಯಕ,
ಅಶೋಕ ಮುಸ್ಟೂರು,ಸೈಯಾದ್ ಯದ್ದುಲ್ಲಾ ಹುಸೇನಿ ಮತವಾಲೆ, ವಿಶ್ವನಾಥ ಆಲ್ದಾಳ, ಮನೋಹರ ವಿಶ್ವಕರ್ಮ, ಹನುಮಂತಪ್ಪ ದೇವಿಪುರ, ಶರಣಬಸವ ಹರವಿ, ಶಿವಕುಮಾರ್ ಸ್ವಾಮಿ, ಬಸವರಾಜ ಗೋವಿನದೊಡ್ಡಿ, ಅರವಿಂದ ದೇಸಾಯಿ. ನಿಜಾಂ ಪಾಷ, ಸತ್ಯನಾರಾಯಣ ಮುಸ್ಟೂರು, ಉಮೇಶ ಕುಂಬಾರ, ಚನ್ನಬಸವ ಬಲ್ಲಟಗಿ, ಶಾಮೀದ್ ಪಾಷ ಕುರ್ಡಿ, ಸಮ್ದಾನಿ ಸಿದ್ದುಕಿ. ಕೊರವಯ್ಯ ನಾಯಕ, ಸುಭಾಷ ನಾಯಕ, ಹನುಮೇಶ ಕವಿತಾಳ, ದತ್ತಾತ್ರೇಯ,ಯಲ್ಲಪ್ಪ, ಶ್ರೀನಿವಾಸ ನಂದಿಹಾಳ ಮತ್ತಿತರರು ಇದ್ದರು.