ಲಿಂಗಸೂಗುರು ಪಟ್ಟಣದ “ಗಡಿಯಾರ ಚೌಕ” ಎಂಬುದು ಇವತ್ತಿಗೂ ಊರಮಧ್ಯೆ ಮುಗಳ್ನಗುತ್ತ ನಿಂತ ಬುದ್ದನಂತೆ ಕಾಣಿಸುತ್ತದೆ.
ಚೌಕಕ್ಕೆ ಕಣ್ಣಿದ್ದು ನಾವು ಮಾಡುವ,ಮುಚ್ಚಿಡುವ ಪಸಾಯಿಸುವ ಎಲ್ಲವನ್ನೂ ತೆರೆದ ಕಣ್ಗಳಿಂದ ನೋಡುತ್ತ ಆಕಾಶದಂಚಲಿರುವ ದೇವರಿಗೆ ವರದಿ ನೀಡುವ ದೇವದೂತನಿರಬಹುದೆಂದು ಅನುಮಾನ ಬರುತ್ತದೆ!
ಅದಕ್ಕೆ ಅಲ್ಲಿ ಹಾಯುವಾಗೆಲ್ಲ ಮುಗಳ್ನಗುತ್ತ ಮೇಲೆ ನೋಡಿ ಚೌಕಕ್ಕೊಂದು ಸಲಾಮ್ ಹೇಳುತ್ತೇನೆ!ಆವಾಗೆಲ್ಲ ಅದು ಎದುರು ಮುಗಳ್ನಕ್ಕು
‘ಚೊಲೊ ಇರು’ ಅಂತ ಅಭಯ ನೀಡಿದಂತೆನಿಸುತ್ತದೆ..
ಗಡಿಯಾರ ಚೌಕದ ಕುರಿತು ಬರೆದ ಲಲಿತ ಪ್ರಬಂಧ ನನ್ನ ಹೊಸ ಪುಸ್ತಕದಲ್ಲಿ ಇದೆ..
ಕೆದಕುತ್ತ ಹೋದಂತೆ ಅದೆಷ್ಟು ಸಂಗತಿಗಳು ಸಿಗುತ್ತಾ ಹೋದವೆಂದರೆ ಓದಿದರೆ ನೀವು ಖಂಡಿತ ಪುಳಕಗೊಳ್ಳುತ್ತೀರಿ..
ಪುಸ್ತಕ ಬರಲಿನ್ನೂ ಬೆರಳೆಣಿಕೆಯ ದಿನಗಳಷ್ಟೇ..
ನಿಮ್ಮ ಹಾರೈಕೆಗಳಿರಲಿ..

ಮೊ:8217337933