ಮಾನ್ವಿ: ಸಾಲಿಡಾರಿಟಿ ಯೂಥ್ ಮೂವ್‍ಮೆಂಟ್ ಸಂಘಟನೆಯಿಂದ ಮನವಿ ಸಲ್ಲಿಕೆ, ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ

ಮಾನ್ವಿ:
ಅಸ್ಸಾಂನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡಿನ ಕಾಳಗ ನಡೆಸಿ ದೌರ್ಜನ್ಯ ನಡೆಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ಸಾಲಿಡಾರಿಟಿ ಯೂಥ್ ಮೂವ್‍ಮೆಂಟ್ ಸಂಘಟನೆಯ ಸ್ಥಳೀಯ ಘಟಕ ಮತ್ತಿತರ ಸಂಘಟನೆಗಳ ಸದಸ್ಯರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಅಸ್ಸಾಂ ಸರ್ಕಾರವು ಬಲವಂತವಾಗಿ ನಾಗರಿಕರನ್ನು ತೆರವುಗೊಳಿಸಿರುವ ಪ್ರಕ್ರಿಯೆ ಆರಂಭಿಸಿರುವ ಕಾರಣ ಇಬ್ಬರು ಅಮಾಯಕರು ಹತ್ಯೆಯಾಗಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದ್ದು ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ರಾಜೀನಾಮೆ ನೀಡಬೇಕು. ಸದರಿ ದೌರ್ಜನ್ಯ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೇಂದ್ರ ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಸಲ್ಲಿಸಲಾಯಿತು. ಸಾಲಿಡಾರಿಟಿ ಯೂಥ್ ಮೂವ್‍ಮೆಂಟ್ ಸಂಘಟನೆಯ ಸ್ಥಳೀಯ ಘಟಕದ ಅಧ್ಯಕ್ಷ ನಾಸಿರ್ ಅಲಿ, ಉಪಾಧ್ಯಕ್ಷ ಅಲೀಮ್ ಖಾನ್, ಕಾರ್ಯದರ್ಶಿ ಹಸೀಬುರ್ ರೆಹಮಾನ್, ಪುರಸಭೆಯ ಸದಸ್ಯ ಶೇಖ್ ಫರೀದ್ ಉಮರಿ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್, ಉಪಾಧ್ಯಕ್ಷ ಅಬ್ದುಲ್ ರೆಹಮಾನ, ವೆಲ್ಫೇರ್  ಪಾರ್ಟಿ ಅಧ್ಯಕ್ಷ ಶೇಖ್ ಬಾಬಾ ಹುಸೇನ್, ಎಸ್.ಐ.ಒ ಸಂಘಟನೆಯ ಅಧ್ಯಕ್ಷ ಅಬ್ದುಲ್ ಅಜೀಜ್, ಇತರ ಪದಾಧಿಕಾರಿಗಳಾದ ಹಾರೂನ್, ಮುಹಮ್ಮದ್ ಜೀನಿಯಸ್, ಆಜಮ್, ಅತೀಕ್ ಪಾಷ, ಆಸಿಫ್ ಜೀನಿಯಸ್, ನಿಜಾಮ್,ನಿಜಾಮ್, ವಸೀಮ್ ಪಾಶಾ, ಅಮೀರ್, ಹುಸೇನ್ ನಾಯಕ, ಸುಹೈಲ್, ಸುಹೈಲ್ ಖುರೇಶಿ, ಚಾಂದ್ ಟೇಲರ್, ಇಮ್ತಿಯಾಜ್ ಅಬ್ದುಲ್ ಖೈಯುಮ್, ಶರ್ಫುದ್ದೀನ್, ರಫೀಕ್ ಬಾಗಲ್ ಕೊಟ್, ಸಮೀರ್ ಪಾಶ, ಆಮೀರ್ ಹುಸೈನ್, ಅಬ್ದುಲ್ ಜಬ್ಬಾರ್, ಇಸ್ಹಾಕ್, ಸುಹೇಲ್ ಮನ್ಸೂರಿ ಮತ್ತಿತರರು ಭಾಗವಹಿಸಿದ್ದರು.