ರಾಯಚೂರು:ಶಹೀದ್ ಭಗತ್ ಸಿಂಗ್ ಅವರ 114 ಜನ್ಮದಿನಾಚರಣೆ

ಶಹೀದ್ ಭಗತ್ ಸಿಂಗ್ ಅವರ 114 ಜನ್ಮದಿನಾಚರಣೆ ಅಂಗವಾಗಿ ರಾಯಚೂರಿನ ಭಗತ್ ಸಿಂಗ್ ವೃತ್ತದಲ್ಲಿ ಮಂಗಳವಾರ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಕಾರ್ಯಕ್ರಮ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಹೇಶ್ ಚೀಕಲ್ಪರ್ವಿ ಅವರು ಮಾತನಾಡಿದರು. ಭಗತ್ ಸಿಂಗ್ ಕಂಡ ಕನಸು ನನಸಾಗುವ ನಿಟ್ಟಿನಲ್ಲಿ ಇವತ್ತಿನ ದಿನ ಸಂಕಲ್ಪ ತೊಡಬೇಕಾಗಿದೆ. ಭಗತ್ ಸಿಂಗ್ ಅವರು ಬ್ರಿಟಿಷರು ಭಾರತ ಬಿಟ್ಟು ತೊಲಗಿದರೆ ಮಾತ್ರ ಸಾಕಾಗುವುದಿಲ್ಲ. ಒಂದು ಸಮಾಜವಾದ ರಾಷ್ಟ್ರವನ್ನು ನಿರ್ಮಾಣ ಮಾಡಬೇಕೆಂಬುದು ಅವರ ಕನಸಾಗಿತ್ತು. ಎಲ್ಲಾ ಬಡಜನರಿಗೆ ಮೂಲಭೂತ ಅವಶ್ಯಕತೆಗಳು ಸಮಾನವಾಗಿ ಹಂಚಿಕೆ ಆಗಬೇಕು ಎಂದು ಬಯಸಿದರು. ಅಂತ ಸಮಾಜ ನಿರ್ಮಾಣಕ್ಕಾಗಿ ಪಣತೊಡಲು ಕರೆ ನೀಡಿದರು.

AIDYO ಜಿಲ್ಲಾ ಅಧ್ಯಕ್ಷರಾದ ಚನ್ನಬಸವ ಜಾನೇಕಲ್ ಅವರು ಮಾತನಾಡಿ, ಯಾವುದೇ ಹಳೆಯ ವಿಚಾರಗಳನ್ನು ಹಾಗೆ ಒಪ್ಪಬೇಡಿ ತರ್ಕದ ಓರೆಗಲ್ಲಿಗೆ ಹಚ್ಚಿ ನೋಡಿ, ಅಗ ಅದು ಸರಿ ಇದ್ರೆ ಮಾತ್ರ ಒಪ್ಪಿಕೊಳ್ಳಿ ಇಲ್ಲ ದಿದ್ದರೆ ಅದನ್ನು ಟೀಕೆ ಮಾಡಿ ಎಂದು ಭಗತ್ ಸಿಂಗ್ ಅವರ ಮಾತನ್ನು ಉಲ್ಲೇಖಿಸಿ, ಭಗತ್ ಸಿಂಗ್ ಅವರ ವಿಚಾರಧಾರೆ ವೈಜ್ಞಾನಿಕ ಮನೋಧರ್ಮ ಮತ್ತು ತರ್ಕದ ಮೇಲೆ ನಿಂತ್ತಿದೆ ಎಂಬುದನ್ನು ನೆನಪಿಸಿದರು. ಪ್ರಸ್ತುತ ಕೇಂದ್ರ , ರಾಜ್ಯ ಸರ್ಕಾರಗಳು ಬಂಡವಾಳ ಶಾಹಿಗಳ ಪರವಾಗಿ ನಿಂತಿವೇ. ಇದರಿಂದಾಗಿ ಬಡತನ, ನಿರುದ್ಯೋಗ , ಬೆಲೆ ಎರಿಕೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರ ವಿರುಧ್ಧ ಹೋರಾಡಲು ಮುಂದೆ ಬರಬೇಕು ಎಂದರು. ಅಲ್ಲದೇ AIMSS ಮಹಿಳಾ ಸಂಘಟನೆಯ ಸಂಚಾಲಕಿ ಉಮಾ ಮಹೇಶ್ವರಿ ಅವರು ಮಾತನಾಡಿದರು. ಪೀರ್ ಸಾಬ್ ಕಾರ್ಯಕ್ರಮ ನಿರ್ವಹಿಸಿದರು. ಎಐಯುಟಿಯುಸಿ ಮುಖಂಡರಾದ ಅಣ್ಣಪ್ಪ, ಎಐಎಂಎಸ್ಎಸ್ ಸದಸ್ಯರು ಗಾಯತ್ರಿ, ಸರೋಜ,ಕಾರ್ತಿಕ, ಹೇಮಂತ್, ವೀರೇಶ್, ಅಮೋಘ, ಯಶವಂತ, ಎಐಡಿವೈಒ ಸದಸ್ಯ ಅಭಿಲಾಷ್, ನೂರ್ ಪಾಶಾ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.