ಮಾನ್ವಿ; ತಾಯಿ, ಮಗು ಆಸ್ಪತ್ರೆ ಉದ್ಘಾಟನೆಗೆ ಜಮಾತೆ ಇಸ್ಲಾಮಿ ಹಿಂದ್ ಪದಾಧಿಕಾರಿಗಳ ಮನವಿ

ಮಾನ್ವಿ ಸೆ 24: ಪಟ್ಟಣದಲ್ಲಿ  ಹೊಸದಾಗಿ ನಿರ್ಮಿಸಿರುವ ತಾಯಿ ಮಗು ಸರ್ಕಾರಿ ಆಸ್ಪತ್ರೆಯನ್ನು ಉದ್ಘಾಟಿಸುವಂತೆ  ಜಮಾತೆ ಇಸ್ಲಾಮಿ ಹಿಂದ್  ಸಂಘಟನೆಯ ಸಮಾಜ ಸೇವಾ ವಿಭಾಗದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಶುಕ್ರವಾರ ತಹಸೀಲ್ದಾರ ಮತ್ತು ಪುರಸಭೆಯ ಮುಖ್ಯಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಾಯಿ, ಮಗು ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಗೊಂಡು ೨ ವರ್ಷಕ ಳೆದರು ಇದುವರೆಗೂ ಉಧ್ಘಾಟನೆ ಭಾಗ್ಯಕಾಣದೆ ಬಡ ಜನರಿಗೆ ಸಿಗಬೇಕಿರುವ ಚಿಕಿತ್ಸಾ ಸೌಲಭ್ಯ ಮರೀಚಿಕೆಯಾಗಿ ಪರಿಣಮಿಸಿದೆ. ಈಗಾಗಲೇ ಕೋವಿಡ್- ೧೯ ಅಲೆಗೆ ಅನೇಕರು ತುತ್ತಾಗಿರುವದು ರ್ಘಟನೆಗಳು ಮಾಸುವ ಮುನ್ನವೇ ೩ನೇಅಲೆ ಭೀತಿ ನಡುವೆ ಮಕ್ಕಳು ಡೆಂಗಿ,ಮಲೇರಿಯಾದಂಹ ಸಾಂಕ್ರಾಮಿಕ ರೋಗಗಳ ಬಾಧೆಗೆ ತುತ್ತಾಗಿದ್ದು ಇದರಿಂದ ಪಾಲಕರಲ್ಲಿ ಅತಿ ಹೆಚ್ಚಿನ ಆತಂಕ ಶುರುವಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸುವಂತಾಗಲು ತಾಯಿ,ಮಗು ಆಸ್ಪತ್ರೆಯನ್ನು ಪ್ರಾರಂಭಿಸಿ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು. ಜಮಾತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಅಬ್ದುಲ್ ಕರೀಂಖಾನ್,ಸಂಚಾಲಕ ಎಂ.ಎ.ಹೆಚ್.ಮುಖೀಂ, ಅಬ್ದುಲ್ ರಹೆಮಾನ್, ಸೈಯದ್ ಅಕ್ಬರ್‌ಪಾಷಸಾಬ್, ದಾವುದ್ ಸಿದ್ದಿಖಿ, ಜಿಲಾನಿ ಮಿಯ್ಯಾಸಾಬ್, ಶೇಖ್ ಬಾಬಾ ಹುಸೇನ್, ಎಂ.ಎಂ.ಖಾನ್‌ಸಾಬ್, ಶೇಖ್ ಮಹೆಬೂಬ್, ಸೈಯದ್ ಆನ್ವರ್‌ಖಾದ್ರಿ, ಮಿರ್ಜಾಬಾ ಬಾಬೇಗ್, ಮಹ್ಮದ್ ಮೂಸಾ, ಅಲ್ಲಾಭಕ್ಷ, ಮಹ್ಮದ್ ಆರೂನ್, ಅಬ್ದುಲ್ ಸತ್ತಾರ್, ಸೈಯದ್  ಇಕ್ಬಾಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.