ವಿಡಂಬನೆ: ಹೀಗೆ_ಉಂಟು….!

#ಹೀಗೆ_ಉಂಟು….!

  -ಬಸವರಾಜ ಭೋಗಾವತಿ

ನಮ್ ಕಡೆ ಯಾರಾದ್ರೂ ಯಾವದರ ಮೆಂಬರ್ ಅಥವಾ ಇನ್ಯಾವುದೊ ಅಧಿಕಾರ ಪಡೆದರೆ, ಆಪ್ತರೆನಿಸಿಕೊಂಡ ಬಹುತೇಕರು ಕೊಡುವ ಮೊದಲ ಸಲಹೆ, ‘ಸ್ವಲ್ಪ ಏನರಾ ಮಾಡಕ್ಯಾ….’.

ಅವರ ಸಂಬಂಧಿಗಳಿಗೆ, ‘ ನಿಮ್ಮತಗ ಅಧಿಕಾರ ಸಿಕ್ಕಾದ, ನೀವೂ ಏನರ ಮಾಡಿಕ್ಯರಿ’ ..ಎನ್ನುವ ಸಲಹೆ ಕೂಡ ಇರುತ್ತದೆ.

ಕೆಲವು ದಿನಗಳ ನಂತರ ಕೇಳುವ ಪ್ರಶ್ನೆ,’ ಏನರಾ ಮಾಡಿಕಂಡ್ಯಾ ಅಥವಾ ಇಲ್ಲಾ?’

ಅಧಿಕಾರ ಮುಗಿದ ಮ್ಯಾಲೆನೂ ಮೊದಲಿನಂಗಾ ಇದ್ರಾ, ಅವರ ಬಗ್ಗೆ ಹೇಳುವ ಮಾತು, ‘ ದಡ್ಡ ಎಂತಾ ಚಾನ್ಸ್ ಕಳಕಂಡ…ಅಥವಾ ಮೋಜುಗಾರನಾಗಿದ್ದರೆ….ಹುಚ್ ಸೂಳೆಮಗ, ಅವನೇನೂ ಮಾಡಿಕ್ಯಲಿಲ್ಲ.. ಗಳಿಸಿದ್ದೆಲ್ಲಾ ಕುಡ್ದ್ ತಿಂದು ಮಜಾ ಮಾಡಿ, ಮಂದಿ ಬಾಯಾಗ ಇಟ್ ಬಂದಾನ…!’

( ನಮ್ಮ ಜನರ ನಿರೀಕ್ಷೆಗಳು ಹೀಗಿರುವಾಗ….. ಅಭಿವೃದ್ಧಿ, ಸರ್ಕಾರದ ಸೌಲಭ್ಯಗಳು…..?? )