ಕೊಟ್ಟೂರು ಸೆ.20: ಮಕ್ಕಳಲ್ಲಿನ ಆವಿಷ್ಕಾರದ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಶಾಲೆಗಳಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ನೀಡಿದೆ. ಪ್ರಯೋಗಾಲಯದ ಎಲ್ಲ ಸಾಧನಗಳು ಸಮಪರ್ಕವಾಗಿ ಬಳಕೆಯಾಗಬೇಕು ಎಂದು ಸಂಸದ ವೈ ದೇವೇಂದ್ರಪ್ಪ ಹೇಳಿದರು.
ತಾಲ್ಲೂಕಿನ ನಿಂಬಳಗೇರೆ ಗ್ರಾಮದ ಬಿ.ಕೆ.ವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯವಾಗಿ ಉತ್ತಮ ಶಿಕ್ಷಣ ಸಿಗದಿದ್ದರೆ ಆ ಪ್ರದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಮಕ್ಕಳಲ್ಲಿ ಇರುವ ಮುಗ್ಧತೆಯನ್ನು ಉಳಿಸಿಕೊಂಡು, ಅವರ ಕುತೂಹಲ ತಣಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಈ ಪ್ರಯೋಗಾಲಯ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ ಗುರುಸಿದ್ದಸ್ವಾಮಿ, ಮಾತನಾಡಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಬಿಉಮಾದೇವಿ,ನೌಕರರ ಸಂಘದ ಜಗದೀಶ್ ನಾಯ್ಕ್, ಭೂಧಾನಿ ಬಿ.ಎಸ್ ಕೊಟ್ರೇಶಪ್ಪ, ಮುಖ್ಯ ಶಿಕ್ಷಕ ಫಕೀರಪ್ಪ,ಕ್ಷೇತ್ರ ಸಮನ್ವಯಧಿಕಾರಿ ಜಮ್ಮೀರ್ ಅಹ್ಮದ್, ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ್ ಗೌಡ.ಎಂ.ಜಿ, ಜೆಡ್ಡಿತಲೆ ಸಿದ್ದೇಶ್, ಗ್ರಾಪಂ ಸದಸ್ಯರಾದ ಉಮೇಶ್.ಬಿ, ವಿಜ್ಞಾನ ಶಿಕ್ಷಕ ಬಣಕಾರ್ ಪತ್ರೇಶ್, ಶಿಕ್ಷಕರಾದ ವೀರಭದ್ರಪ್ಪ, ಶರ್ಮತ್ ಕಣದಮನಿ, ವಿದ್ಯಾರಣ್ಯ, ಶಿವಪುತ್ರ ಗೌಡ್ರು, ನಾಗರಾಜ ಎಂಬಿ, ಶಿಕ್ಷಕಿ ಅಂಜಿನಮ್ಮ, ಮಠದ ನಟರಾಜ, ಗಡ್ಡೇರವಿಕುಮಾರ್ ಇತರರಿದ್ದರು.