ಎರಡು ತಿಂಗಳ ಆಶಾ ಕಾರ್ಯಕರ್ತರ ಬಾಕಿ ಪೋತ್ಸಾಹ ಧನ,ಪಿಕ್ಸ್ ಪೇಮೆಂಟ್ ಇತರ ಪ್ರೋತ್ಸಾಹಧನ ಪಾವತಿಸಲು ಹಾಗೂ ಆಶಾ ಸುಗಮಕಾರರ 5 ತಿಂಗಳ ವೇತನವನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಇಂದು ಮಾನ್ವಿ ತಾಲೂಕಿನ ತಾಲೂಕಾ ಆಶಾ ಮೇಲ್ವಿಚಾರಕರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತರು ಕೇಂದ್ರದ ಪ್ರೋತ್ಸಾಹಧನ ನೀಡಲು ಬಳಸುವ ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಇಂದಿಗೂ ರಾಜ್ಯದಲ್ಲಿ ಪ್ರತಿ ತಿಂಗಳಿಗೊಮ್ಮೆ ವೇತನವಿಲ್ಲದೆ ಪರದಾಡುವಂತಾಗಿದೆ. ಮತ್ತೆ ಬದಲಾದ ರಾಜ್ಯ ಸರ್ಕಾರದ ನೂತನ ವೇತನ ಪಾವತಿ ವಿಧಾನ ಡಿಬಿಟಿಯಿಂದಾಗಿ ರಾಜ್ಯದ ಮಾಸಿಕ ನಿಗದಿತ ವೇತನ ರೂ.4000/- ಎರಡು ತಿಂಗಳಿನಿಂದ ವಿಳಂಬವಾಗಿರುವುದು ಆಶಾ ಕಾರ್ಯಕರ್ತರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಅಲ್ಲದೆ ಕೇಂದ್ರದ ಪ್ರೋತ್ಸಾಹಧನ ಎಂಸಿಟಿಎಸ್ ನಲ್ಲಿ ದಾಖಲಾಗುವಂತಹ ವೇತನವು ಸಹ ಎರಡು ಮೂರು ತಿಂಗಳಿಂದ ಬಂದಿಲ್ಲ.ಪದೇಪದೇ ವೇತನ ಪಾವತಿ ವಿಧಾನವನ್ನು ಬದಲಾವಣೆ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೆ ಆರ್ಸಿಎಚ್ ಪೋರ್ಟ್ಲ್ ನಲ್ಲಿ ಪ್ರತಿತಿಂಗಳು ಆಶಾಗೆ ಎಷ್ಟು ಕೆಲಸಕ್ಕೆ ಎಷ್ಟು ವೇತನ ಬರುತ್ತಿದೆ ಎಂಬುದು ತಿಳಿಯುತ್ತಿಲ್ಲ. ಹಾಗೆಯೇ ಪಂಚಾಯತಿ ಚುನಾವಣೆ ಹಾಗೂ ಮತ್ತು ಮಸ್ಕಿ ಉಪ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ಆಶಾಗಳಿಗೆ ಇದುವರೆಗೂ ಗೌರವಧನವನ್ನು ವಿತರಿಸದೆ ಇರುವುದು ಸಂಬಂಧ ಪಟ್ಟ ಇಲಾಖೆಯ ಹೊಣೆಗಾರ ಆಗಿದೆ. ಕ್ಷಯರೋಗಕ್ಕೆ ಸರ್ವೆಗಳಲ್ಲಿ ಭಾಗವಹಿಸುವ ಆಶಾಗಳಿಗೆ ಯಾವುದೇ ಗೌರವಧನ ಇರುವುದಿಲ್ಲ. ಹಾಗೆಯೇ ಈ ಕೋವಿಡ್ ಸಂದರ್ಭದಲ್ಲಿ ಆಶಾಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರೂ ಅವರ ಸಮಸ್ಯೆಯನ್ನು ಪರಿಹಾರ ಮಾಡಿರುವುದಿಲ್ಲ. ವೇತನವಿಲ್ಲದೆ ಅವರು ಕೆಲಸ ಮಾಡಬೇಕಾಗಿದೆ. ಆಶ ಸುಗಮಕಾರರಿಗೆ ಐದು ತಿಂಗಳಿನಿಂದ ವೇತನ ಪಾವತಿಸಿಲ್ಲ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.
ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ತಾಲೂಕು ಆಶಾ ಮೇಲ್ವಿಚಾರಕರಾದ ಮರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ಆಶಾ ಸಂಘದ ತಾಲ್ಲೂಕಿನ ಗೌರವ ಅಧ್ಯಕ್ಷರಾದ ಚನ್ನಬಸವ ಜಾನೇಕಲ್, ಉಪಾಧ್ಯಕ್ಷರಾದ ಸುಜಾತಾ, ಕಾರ್ಯದರ್ಶಿ ನರಸುಬಾಯಿ, ನಸೀಮಾ ಬೇಗಂ, ಶ್ರೀದೇವಿ ಸಂಗಾಪುರ, ಶ್ರೀಲತಾ, ಪ್ಯಾರಿಬೇಗಂ, ಅನುಸುಯಾ, ಈಶಮ್ಮ, ಹಂಪಮ್ಮ, ಶ್ರೀದೇವಿ ಬಲ್ಲಟಗಿ ಮುಂತಾದವರು ಭಾಗವಹಿಸಿದ್ದರು.