ಸಿರವಾರ: ರಾಜ್ಯ ಕ್ರಿಕೆಟ್ ತಂಡಕ್ಕೆ ವಿಜಯರಾಜ ಜಂಬಲದಿನ್ನಿ ಆಯ್ಕೆ..

ಅಂಡರ್-19 ರಾಜ್ಯ ಕ್ರಿಕೆಟ್ ತಂಡಕ್ಕೆ ವಿಜಯರಾಜ ಜಂಬಲದಿನ್ನಿ ಆಯ್ಕೆ..

ಹೌದು ಮತ್ತೊಂದು ಸಂತಸದ ಸುದ್ದಿ ಈ ದಿನ ಹೊರಬಿದ್ದಿದೆ ಹೊಸದಾಗಿ ರಚನೆಯಾದ ಸಿರವಾರ ತಾಲ್ಲೂಕಿನ ಜಂಬಲದಿನ್ನಿ ಎಂಬ ಪುಟ್ಟ ಗ್ರಾಮದ ವಿಜಯರಾಜ ತಂದೆ ಟಿ.ಬಸವರಾಜ ಜಂಬಲದಿನ್ನಿ ಇಂದು ಕರ್ನಾಟಕದ ಅಂಡರ್-19 ತಂಡಕ್ಕೆ ಆಯ್ಕೆಯಾಗಿ ರಾಜ್ಯದ ಕ್ರೀಢಾಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದ್ದಾನೆ.
ಆದರೆ ವಿಜಯರಾಜನನ್ನು ಬಾಲ್ಯದಿಂದಲೂ ನೋಡಿದವರಿಗೆ ಇದು ಅತ್ಯಂತ ನಿರೀಕ್ಷಿತವಾಗಿದೆ.
ಏಕೆಂದರೆ ಆತ ಬುದ್ದಿ ತಿಳಿದಾಗಿನಿಂದಲೂ ಬ್ಯಾಟು-ಬಾಲಿನೊಂದಿಗೆ ಆಟಕ್ಕೆ ಬಿದ್ದಾತ.
ಕ್ರಿಕೆಟ್ ನ ಹೊರತು ಬೇರೆ ಜಗವನ್ನೂ ಕನಸಿನಲ್ಲಿಯೂ ನೋಡಲು ಇಚ್ಛಿಸದ ವಿಜಯರಾಜ ಇಂದು ಸಾಧನೆಯ ಮೊದಲ ಮೆಟ್ಟಿಲ ಮೇಲೆ ವಿರಾಜಮಾನನಾಗಿದ್ದಾನೆ.
‘ವಿ.ಆರ್.ಎಸ್’ ಎಂಬುದು ಖಾಸಗಿ ಶಾಲೆಗಳಲ್ಲೇ ಬ್ರಾಂಡ್ ಆಗಿದ್ದ ದಿನಗಳವು, ಬಸನಗೌಡರಿಗೆ ಬಹಳ ದಿನಕ್ಕೆ ಹುಟ್ಟಿದ ಮಗನನ್ನು ಅದೇಕೆ ಕ್ರಿಕೆಟ್ ಆಟಗಾರನನ್ನಾಗಿ ಮಾಡಬೇಕು ಎನಿಸಿತೊ ಬ್ಯಾಟು,ಬಾಲು ಕೊಟ್ಟೇ ಬಿಟ್ಟರು.
ಮಗ ಬೆಳೆದಂತೆ ಶಾಲೆಯ ಅಂಗಳದಲ್ಲೇ ನೆಟ್ ಪ್ರಾಕ್ಟೀಸ್ ಗೆ ಬೇಕಾದ ಸಕಲ ಸೌಲಬ್ಯ ದೊರೆಯುವಂತೆ ಮಾಡಿದರು.
ನನ್ನ ನೆನಪು ಸರಿ ಇರುವದಾದರೆ ಆ ದಿನಗಳಲ್ಲಿ ವಿಜಯರಾಜನ ಜೊತೆ ಜಂಬಲದಿನ್ನಿಯ ಯುವರಾಜ ಎಂಬ ಎಡಗೈ ಹುಡುಗನೂ ಚಂದಗೆ ಆಡುತ್ತಿದ್ದ.
ಆದರೆ ಈಗ ಆತನ ಪತ್ತೆಯಿಲ್ಲ.
ವಿಜಯರಾಜನ ಅದೃಷ್ಟ ನೆಟ್ಟಗಿದೆ ಆ ಕಾರಣಕ್ಕೆ ಆತನಿಗೆ ರಾಜ್ಯ ಕ್ರಿಕೆಟನ ಬಾಗಿಲು ತೆರೆದುಕೊಂಡಿದೆ.
ಒಮ್ಮೊಮ್ಮೆ ಅದೃಷ್ಠವಿಲ್ಲದಿದ್ದರೆ ಪ್ರತಿಭೆಯಿದ್ದರೂ ಅವಕಾಶ ಸಿಗುವದಿಲ್ಲ ಬೇಕಾದರೆ ನೆನಪು ಮಾಡಿಕೊಳ್ಳಿ ಕೆ.ಪಿ.ಎಲ್ ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ಖಾಯಂ ಆಟಗಾರನಾಗಿದ್ದ, ಕರ್ನಾಟಕದ ಬೆಸ್ಟ್ ಕ್ರಿಕೆಟ್ ಕೋಚ್ ಇರ್ಫಾನ್ ಸೇಠ್ ಅವರ ಶಿಷ್ಯನಾಗಿದ್ದ ಮಾನ್ವಿಯ ಶರಣುಗೆ ಒಂದೇ ಒಂದು ಪಂದ್ಯಕ್ಕೂ ಆಡುವ ಹನ್ನೊಂದರೊಳಗೆ ಅವಕಾಶ ಸಿಗಲಿಲ್ಲ.
ಆದರೆ ವಿಜಯರಾಜನಿಗೆ ದ್ರಾವಿಡ್ ದ್ರೋಣನಂತೆ ಸಿಕ್ಕರು ಎಂಬ ಮಾತು ಕೇಳಿಬರುತ್ತಿದೆ!
ಇದಕ್ಕಿಂತಲೂ ಸೌಭಾಗ್ಯವೇನಿದೆ ದ್ರಾವಿಡ್ ಕೈಯಲ್ಲಿ ಪಳಗಿದ ಆಟಗಾರರೆಲ್ಲ ಇಂದು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಮಿಂಚಿನ ಸಂಚಾರ ಮೂಡಿಸುತ್ತಿದ್ದಾರೆ ನಮ್ಮ ಭಾಗದ ಹುಡುಗನೂ ಮುಂದಿನ ದಿನಗಳಲ್ಲಿ ಅಂತಹದೇ ಮಿಂಚು ಹರಿಸಲಿ ರಾಜ್ಯವಲ್ಲದೆ ರಾಷ್ಟ್ರ ಮಟ್ಟದಲ್ಲೂ ಆಡುವಂತಾಗಲಿ..

-ಶರಣಬಸವ ಕೆ.ಗುಡದಿನ್ನಿ

One thought on “ಸಿರವಾರ: ರಾಜ್ಯ ಕ್ರಿಕೆಟ್ ತಂಡಕ್ಕೆ ವಿಜಯರಾಜ ಜಂಬಲದಿನ್ನಿ ಆಯ್ಕೆ..

Comments are closed.